ಮದುಮಗಳು – ಉಷಾ
ಅವಳುಡುವ ಸೀರೆಯೂ ನಿಮ್ಮಾಯ್ಕೆಯೇ...
ಅದ್ಯಾವ ಮಹಾ ಬಿಡಿ
ಅವಳ ಸಂಗಾತಿಯೇ ನಿಮ್ಮಾಯ್ಕೆಯಾಗಿರುವಾಗ
ಅವಳೇ ಒಂದು ಮೊಗ್ಗು
ಮಣಭಾರದ ಮೊಗ್ಗಿನ ಜಡೆ ಯಾಕೆ
ಕತ್ತನಲುಗಾಡಿಸದಿರಲು
ಇಂದಿನಿಂದಲೇ ......ಅಭ್ಯಾಸವೆ
ಮುದ್ದಾದ ಮೂಗನು ಚುಚ್ಚಿ
ಗಾಯಮಾಡಿದರೇನೆ ಅಂದವೆ
ಅವಳ ನರಳಿಕೆಯಲ್ಲೆ ನಿಮಗಾನಂದವೆ
ಅವಳ ಕಾಲುಂಗುರ
ಮುನ್ನುಗ್ಗಲು ತಯಾರಾದಾಗ 'ನಿಲ್ಲು' ಎನ್ನುವ ಕರೆಗಂಟೆಯೇ
ಕೈ ಸೋತರೂ ಗಂಡನ ಕಿವಿ ಇಂಪು ಮಾಡಲು ಡಜ಼ನು ಬಳೆ
ಕೈರೇಖೆಗಳನೇ ಬದಲಾಯಿಸಿದವು
ಆ ಮದರಂಗಿಯ ಕಲೆ
ನಿದ್ದೆಯನೊದ್ದವು ಆ ನೇಮಗಳು
ಬೆನ್ನೇರಿ ಬಾರಿಸಿದವು ಈ ಪೂಜೆಗಳು
ಸುಸ್ತು ಮಾಡಿದವೆಲ್ಲ ಶಾಸ್ತ್ರಗಳು
ಇನ್ನು ಆ ತಾಳಿಯೋ.....
ಚಿರನಿದ್ರೆಯ ಕುಣಿಕೆಯೂ ಅಲ್ಲ ಎತ್ತುವ ಬಾವಿಹಗ್ಗವೂ ಅಲ್ಲ
ತನ್ನವರ ದೂರ ಮಾಡುವ ಗಡಿದಾರ
ಚಿಂತೆಗಳನೆ ತುಂಬಿಸುವ ಎದೆಭಾರ
ತಾನು ಪರರ ಸ್ವತ್ತು .... ಬಲುಘೋರ
ಮುಖವಾಡವೆ ಇನ್ನು ಬದುಕಪೂರ
ಬೇಸಿಗೆಯ ಬವಣೆ – ವಿಜಯ
ತಾಳಲಾಗದು ಈ ಬೇಸಿಗೆಯ ಸೆಕೆ
ದಿನಕರನೆ ಈ ನಿನ್ನ ಮುನಿಸೇಕೆ
ಮೈಮೇಲೆ ಬರುತಿದೆ ಸಣ್ಣ ಬೊಕ್ಕೆ
ತಂಗಾಳಿಯಾಗುತಿದೆ ಬರಿ ಮರೀಚಿಕೆ
ಹರಿಯುತಿದೆ ಶಿರದಿಂದಲೂ ಬೆವರು
ಇದಕ್ಕಾಗಿ ಕುಡಿಯಬೇಕು ಹೆಚ್ಚು ನೀರು
ತಿನ್ನಬೇಕು ಹಣ್ಣು, ಸೌತೆ,ಕಲ್ಲಂಗಡಿ
ಆಗುವುದು ತಂಪು ನಮ್ಮೆಲ್ಲರ ಬಾಡಿ
ಎಲ್ಲರಲ್ಲೂ ಫ್ಯಾನಿನ ಕೆಳಗಿರವ ತುಡಿತ
ಆದರೆ ಹೆಚ್ಚಾಗುತಿದೆ ವಿದ್ಯುತ್ ಕಡಿತ
ಸಹಿಸಲಾಗದು ಬಿಸಿಲಿನ ಈ ಬೇಗೆ
ಎಲ್ಲರ ಕೈಯಲ್ಲಿ ಬರುತಿದೆ ಹಳೆಯ ಬೀಸಣಿಗೆ
ಮುದ್ದು ಗುಂಡಮ್ಮ - ನಿಸರ್ಗ
ನನ್ನ ನೋಡಿ ಅಮ್ಮ ಹೇಳುವಳು
"ಇದು ನನ್ನ ಮುದ್ದು ಗುಂಡಮ್ಮ"
ಬೇರೆಯವ್ರು ಹಾಗೆಂದರೆ ಸಿಟ್ಟೇರುವುದು ನೆತ್ತಿಗೆ
ನೀ ಹಾಗೆ ಕರೆದರೆ
ಅದು ನಂಗೆ ಒಪ್ಪಿಗೆ
ಕೆಲಸ ಮಾಡಲು ನಿಂತರೆ ಹೇಳುವಳು ನಂಗೆ
"ಬೇಡಮ್ಮ ಗುಂಡಮ್ಮ
ನೀನು ಸೊರಗಿ ಹೋಗುವೆ ಕಂದಮ್ಮ"
ಹಸಿವಿಲ್ಲ ಎಂದರು ತಿನ್ನಿಸುವಳು ನನ್ನ ಬಿಡದೆ
ಬೇಡ ಎಂದರೆ ಮುನಿಸಿಕೊಳ್ಳುವಳು
ಮಗುವಿನ ಹಾಗೆ
ಅದಕ್ಕಾಗೆ ನಾನು ತಿಂದು ಕಾಯುವೆನು ನಿನ್ನ ಮುಗುಳ್ನಗೆಗೆ..
ತಿನ್ನಿಸುವಳು, ಕೆಲಸ ಮಾಡಲು ಬಿಡಳು...
ನಾನು ಗುಂಡಮ್ಮ ಆಗಲು ನೀನೇ
ಕಾರಣ ಅಮ್ಮ..
ನಾನೂ ಬೆಳೆದಿರುವೆನಮ್ಮ.
ನನ್ನ ಕೆಲಸ ಮಾಡಲು ಬಿಡಮ್ಮ..
ನಾನೂ ಕೂಡ ಸಣ್ಣ ಆಗುವೆನಮ್ಮ
No comments:
Post a Comment