Monday, 5 September 2016

ಸಂಪಾದಕೀಯ


ಮಹಿಳೆಯರಿಗಾಗಿ, ಮಹಿಳೆಯರಿಂದ ಎನ್ನುವ ಪರಿಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂದ ಅಪೂರ್ವ ಕಣ್ಮಣಿ ಪತ್ರಿಕೆ, ಎರಡು ವರ್ಷಗಳ ನಂತರ ಪುನರಾರಂಭಗೊಂಡ ಸಂಚಿಕೆಯಿಂದಲೇ ಓದುಗರ ಬೆಂಬಲವನ್ನು ಪಡೆದುಕೊಳ್ಳುತ್ತಿದೆ. ಮತ್ತೆ ನಮ್ಮನ್ನು ಬೆಂಬಲಿಸುತ್ತಿರುವ ಎಲ್ಲರಿಗೂ ನಮ್ಮ ತಂಡದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ಎಲ್ಲಾ ಓದುಗರು ಪತ್ರಿಕೆಯನ್ನು ಓದಿ ನಮ್ಮ ಬೆನ್ನು ತಟ್ಟುವುದರ ಜೊತೆಗೆ, ತಮ್ಮ ಸಲಹೆ, ಸೂಚನೆಗಳನ್ನು ಕೊಟ್ಟರೆ ಪತ್ರಿಕೆಯನ್ನು ಇನ್ನೂ ಉತ್ತಮಗೊಳಿಸಬಹುದು. ಇದರೊಂದಿಗೆ ಓದುಗರೆಲ್ಲರೂ ಲೇಖನ, ಕಥೆ, ಕವನಗಳನ್ನು ಕಳಿಸಿಕೊಡಬೇಕಾಗಿ ಮನವಿ. ಇಚ್ಛಿಸಿದರೆ, ಪ್ರತಿಯೊಬ್ಬರೂ ಬರೆಯಬಹುದು. ಮನಸ್ಸು ಮಾಡಿ ಬರೆಯಲು ಆರಂಭಿಸಬೇಕು ಅಷ್ಟೇ. ಅದು ಚೆನ್ನಾಗಿರುವುದಿಲ್ಲ ಎಂಬ ಹಿಂಜರಿಕೆ ಬೇಡ. ಯಾವ ಮಹಾನ್ ಬರಹಗಾರರ ಮೊದಲ ಕೃತಿ, ಅತ್ಯದ್ಭುತ ಕೃತಿಯಾಗಿರಲಿಲ್ಲ. ಹಲವಾರು ಬಾರಿ ಎದ್ದು, ಬಿದ್ದು ಕೊನೆಗೆ ಸಾಧನೆಗೈದಿರುತ್ತಾರೆ. ಹಾಗಿದ್ದರೆ, ಇನ್ನು ತಡವೇಕೆ. ಬರೆಯಬೇಕು ಎಂದುಕೊಂಡವರು ಬರೆಯಲಾರಂಭಿಸಿ, ಈ ಮಿಂಚಂಚೆಗೆ ಕಳಿಸಿಕೊಡಿ - 


ಶಿಖರಿಣಿಯರು - ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಣಿ ಕಲ್ಪನಾ ದತ್ತಾ

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಣಿ  ಕಲ್ಪನಾ ದತ್ತಾ
ಭಾರತ ಸ್ವಾತಂತ್ಯ ಸಂಗ್ರಾಮದಲ್ಲಿ “ಚಿತ್ತಗಾಂಗ್ ಸಮರ” ಒಂದು ಮೈಲಿಗಲ್ಲು. ಮಾಸ್ಟರ್ ದಾ ಎಂದೇ ಪ್ರಸಿದ್ಧರಾದ ಸೂರ್ಯಸೇನ್ ರವರ ನೇತ್ರುತ್ವದಲ್ಲಿ ನಡೆದ ಆ ಹೋರಾಟದಲ್ಲಿ ಭಾಗಿಯಾದವರಲ್ಲಿ ಇಬ್ಬರು ಯುವತಿಯರ ಹೋರಾಟ ಅವಿಸ್ಮರಣೀಯ. ಏಕೆಂದರೆ, ಬ್ರಿಟಿಷ್ ದಬ್ಬಾಳಿಕೆ-ದೌರ್ಜನ್ಯಗಳಿಗೇ ಪುರುಷರೇ ಹೆದರಿ ನಡುಗುತ್ತಿದ್ದ ಸಮಯದಲ್ಲಿ ಈ ಈರ್ವರು ಮಹಿಳೆಯರು ಪುರುಷ ಕ್ರಾಂತಿಕಾರಿಗಳಿಗೆ ಸರಿಸಮನಾಗಿ ನಿಂತು ಹೋರಾಟ ನಡೆಸಿದರು. ಪ್ರೀತಿಲತಾ ವದೆದ್ದಾರ್ ಮತ್ತು ಕಲ್ಪನಾ ದತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಹಿಂದಿರಬೇಕಿಲ್ಲ ಎಂಬುದನ್ನು ನಾರಿ ಸಮುದಾಯಕ್ಕೆ, ಸಮಾಜಕ್ಕೆ ತೋರಿಸಿಕೊಟ್ಟರು. 
ಕಲ್ಪನಾರವರ ಜನನವಾಗಿದ್ದು ಅವಿಭಜಿತ ಬಂಗಾಳದ ಚಿತ್ತಗಾಂಗ್ ಜಿಲ್ಲೆಯ ಶ್ರೀಪುರದಲ್ಲಿ (ಇಂದು ಈ ಸ್ಥಳ ಬಾಂಗ್ಲಾದೇಶದಲ್ಲಿದೆ) ೧೯೧೩ರ ಜುಲೈ ೨೭ರಂದು ಜನಿಸಿದ ಇವರು ೧೯೨೯ರಲ್ಲಿ ಮೆಟ್ರಿಕುಲೇಷನ್ ಪರೀಕ್ಷೆ ಪಾಸಾದ ನಂತರ ವಿಜ್ಞಾನದಲ್ಲಿ ಪದವಿ ಪಡೆಯಲು, ಕಲ್ಕತ್ತಾದ ಬೆಥೂನ್ ಕಾಲೇಜಿಗೆ ಸೇರಿದರು. ಅಲ್ಲಿ ಛಾತ್ರಿ ಸಂಘವನ್ನು (ವಿದ್ಯಾರ್ಥಿನಿಯರ ಸಂಘ) ಸೇರಿದರು. ಬೀನಾ ದಾಸ್ ಮತ್ತು ಪ್ರೀತಿಲತಾ ವದೆದ್ದಾರ್ ಸಕ್ರಿಯರಾಗಿದ್ದ ಅರೆ ಕ್ರಾಂತಿಕಾರಕ ಸಂಘಟನೆಯದು. ನಂತರ ಚಿತ್ತಗಾಂಗ್ ಗೆ ಹಿಂದಿರುಗಿದ ಅವರು ೧೯೩೧ ರ ಮೇಯಲ್ಲಿ ಸೂರ್ಯಸೇನ್ ರ ಇಂಡಿಯನ್ ರಿಪಬ್ಲಿಕನ್ ಆರ್ಮಿ ಯ ಚಟ್ಟಗ್ರಾಮ್ ವಿಭಾಗವನ್ನು ಸೇರಿದರು. ಸಶಸ್ತ್ರ ಸ್ವಾತಂತ್ರ್ಯ ಹೋರಾಟ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಬಲ್ಲದು ಎಂದು ನಂಬಿದ್ದ ಸಂಘಟನೆಯದು. ಕ್ರಾಂತಿಕಾರಿಗಳ ನಡುವೆ ಸಂದೇಶಗಳನ್ನು ರವಾನಿಸಲು, ಬಾಂಬ್ ತಯಾರಿಸಲು, ಬ್ರಿಟಿಷರ ಮೇಲೆ ದಾಳಿ ಮಾಡುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಳು. 
ಅಂದಿನ ದಿನಗಳಲ್ಲಿ ಬ್ರಿಟಿಷರು ಭಾರತೀಯರನ್ನು ಹೀನಾಯವಾಗಿ ಕಾಣುತ್ತಿದ್ದರು. ಚಿತ್ತಗಾಂಗ್ ನಲ್ಲಿದ್ದ ಯೂರೋಪಿಯನ್ ಕ್ಲಬ್ ನ ಹೊರಗೆ “ಭಾರತೀಯರಿಗೆ ಹಾಗೂ ನಾಯಿಗಳಿಗೆ ಇಲ್ಲಿ ಪ್ರವೇಶವಿಲ್ಲ” ಎಂದು ಬರೆಯಲಾಗಿತ್ತು. ಬ್ರಿಟಿಷರ ಅಹಂಕಾರವನ್ನು ಮಟ್ಟಹಾಕಲು, ಅವರಿಗೊಂದು ಪಾಠವನ್ನು ಕಲಿಸಲು ಯೂರೋಪಿಯನ್ ಕ್ಲಬ್ ಮೇಲೆ ದಾಳಿ ಮಾಡಲು ನಿರ್ಧರಿಸಲಾಯಿತು. ಆ ಕೆಲಸವನ್ನು ಸೂರ್ಯಸೇನ್ ರವರು ಕಲ್ಪನಾ ಮತ್ತು ಪ್ರೀತಿಲತಾರಿಗೆ ಸೆಪ್ಟೆಂಬರ್ ೧೯೩೧ ರಲ್ಲಿ ವಹಿಸಿದರು. ಆದರೆ ದಾಳಿಗೆ ಒಂದು ವಾರಕ್ಕೆ ಮುಂಚೆ, ಆ ಸ್ಥಳದ ಪರೀಶೀಲನೆ ನಡೆಸುವಾಗ ಇಬ್ಬರನ್ನು ಬಂಧಿಸಲಾಯಿತು. ಬೇಲ್ ಮೇಲೆ ಆಚೆ ಬಂದ ನಂತರ ಇಬ್ಬರೂ ಕಣ್ಮರೆಯಾದರು. ಪ್ರೀತಿಲತಾ ಯೂರೋಪಿಯನ್ ಕ್ಲಬ್ ನ ದಾಳಿಯಲ್ಲಿ ಪೋಲಿಸರ ಗುಂಡೇಟಿಗೆ ಬಲಿಯಾದರು, ಭಾರತ ಸ್ವಾತಂತ್ರ್ಯ ಹೋರಾಟದ ಮೊದಲ ಮಹಿಳಾ ಹುತಾತ್ಮರೆಂಬ ಗೌರವಕ್ಕೆ ಪಾತ್ರರಾದರು. ೧೯೩೩ರ ಫ಼ೆಬ್ರವರಿ ೧೭ರಂದು ಪೊಲೀಸರು ಕ್ರಾಂತಿಕಾರಿಗಳ ಅಡುಗುದಾಣದ ಮೇಲೆ ದಾಳಿ ಮಾಡಿದರು, ಸೂರ್ಯಸೇನ್ ರವರನ್ನು ಬಂಧಿಸಿದರು, ಆದರೆ ಕಲ್ಪನಾ ಅಲ್ಲಿಂದ ತಪ್ಪಿಸಿಕೊಂಡರು. ಆದರೆ, ಅವರನ್ನು ೧೯೩೩ರ ಮೇ ೧೯ರಂದು ಬಂಧಿಸಲಾಯಿತು. ಚಿತ್ತಗಾಂಗ್ ಶಸ್ತ್ರಾಗಾರ ದಾಳಿಯ ಎರಡನೆಯ ವಿಚಾರಣೆಯಲ್ಲಿ ಅವರನ್ನು ಜೀವಾವಧಿ ಶಿಕ್ಷೆಗೆ ಒಳಪದಿಸಲಾಯಿತು. ಆದರೆ, ೧೯೩೯ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.
ಜೈಲಿನಲ್ಲಿದ್ದಾಗ ಮಾರ್ಕ್ಸ್ ವಾದದೆಡೆ ಆಕರ್ಷಿತರಾದ ಅವರು, ೧೯೩೯ರಲ್ಲಿ ಬಿಡುಗಡೆಯಾದ ನಂತರ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿಕೊಂಡರು. ೧೯೪೦ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸೇರಿದ ಅವರು ಪದವಿ ಪಡೆದರು. ೧೯೪೩ ರಲ್ಲಿ ಪಕ್ಷದ ನಾಯಕರಲ್ಲೊಬ್ಬರಾದ ಪಿ ಸಿ ಜೋಷಿಯವರನ್ನು ವಿವಾಹವಾದರು. ೧೯೪೩ರಲ್ಲಿ ಬಂಗಾಳದ ಬರಗಾಲದ ಸಮಯದಲ್ಲಿ ಮತ್ತು ಬಂಗಾಳ ವಿಭಜನೆಯ ಸಮಯದಲ್ಲಿ ಸ್ವಯಂಸೇವಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸಿದರು. ಅವರು ತಮ್ಮ ಹೋರಾಟದ ಚರಿತ್ರೆಯನ್ನು “ಚಿತ್ತಗಾಂಗ್ ಆರ್ಮರಿ ರೈಡರ್ಸ್ ; ರೆಮಿನಿಸೆನ್ಸಸ್” (ಚಿತ್ತಗಾಂಗ್ ಶಸ್ತ್ರಾಗಾರ ದಾಳಿಕಾರರು :ನೆನಪುಗಳು) ಎಂಬ ಹೆಸರಿನಲ್ಲಿ ಬರೆದರು. ಅದು ೧೯೪೫ರಲ್ಲಿ ಇಂಗ್ಲಿಷ್ ನಲ್ಲಿ ಪ್ರಕಟವಾಯಿತು. ಅದರಲ್ಲೊಂದೆಡೆ ಅವರು ತಮ್ಮ ಹೋರಾಟವನ್ನು ಸಮರ್ಥಿಸಿಕೊಳ್ಳುತ್ತಾ ಹೀಗೆ ಬರೆದಿದ್ದಾರೆ : “ಬಂಡಾಯಗಳು ಯಾವಾಗಲೂ ಆಳುವ ವರ್ಗದ ವಿರುದ್ಧವಿರುತ್ತದೆ, ಆದರೆ ಅದು ಸಂವಿಧಾನ ಬಾಹಿರವೇ? ಕೆಲವರು ವಿದೇಶಿ ಆಳ್ವಿಕೆಯನ್ನು ತಿರಸ್ಕರಿಸಬಹುದು, ಆದರೆ ಅದು ಅನ್ಯಾಯವೇ? ಇನ್ನೊಬ್ಬರು ನಮ್ಮ ದೇಶವನ್ನು ಆಕ್ರಮಿಸಿದಾಗ, ಇಲ್ಲಿ ನಡೆಯುವ ಎಲ್ಲಾ ಸರ್ಕಾರಿ ವಿರೋಧಿ ಚಟುವಟಿಕೆಗಳು ಆಳುವ ವರ್ಗಕ್ಕೆ ದೇಶದ್ರೋಹವಾಗಿಯೇ ಕಾಣಿಸುತ್ತದೆ. ಆದರೆ, ಈ ನೆಲದ ಜನರಿಗೆ ಮಾತ್ರ ಸರ್ಕಾರದ ದಬ್ಬಾಳಿಕೆಯನ್ನು ತೊಡೆದುಹಾಕುವುದು, ಸ್ವರಾಜ್ಯವನ್ನು ಸ್ಥಾಪಿಸುವುದು ನ್ಯಾಯವಾಗಿಯೇ ಇರುತ್ತದೆ. ಈ ಹೋರಾಟವನ್ನು ನಾವು ಶಾಂತಿಯ ಮೂಲಕ ಪಡೆಯಲಾಗದು. ಯಾವ ದಮನಕಾರಿಯೂ ತನ್ನ ಅಧಿಕಾರವನ್ನು ಸ್ವಇಚ್ಛೆಯಿಂದ ಬಿಟ್ಟುಕೊಡಲಾರ. ಹಾಗಾಗಿ ನಮಗೆ ಸಶಸ್ತ್ರ ಹೋರಾಟದ ವಿಧಾನ ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ.”
ವಿಭಜನೆಗೆ ಮುನ್ನ ಮತ್ತು ನಂತರ ಅವರು ಬಾಂಗ್ಲಾದೇಶದಲ್ಲಿರುವ ತಮ್ಮ ಊರಿಗಾಗಿ ದುಡಿದರು. ಬಂಗಾಳದ ಬರಗಾಲದಲ್ಲಿ, ಸಮುದಾಯ ಅಡಿಗೆ ಮನೆ ಸ್ಥಾಪಿಸಿ ಹಸಿದವರಿಗೆ ಅನ್ನ ನೀಡಿದರು ಮತ್ತು ಚಿತ್ತಗಾಂಗ್ ನ ಹಳ್ಳಿಯ ರೋಗಗ್ರಸ್ತರಿಗೆ ವೈದ್ಯಕೀಯ ನೆರವನ್ನು ನೀಡಿದರು. ವಿಭಜನೆಯ ಸಮಯದಲ್ಲಿ, ಅವರು ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ನೊಂದವರಿಗೆ ನೆರವು ನೀಡುವ, ಅವರನ್ನು ರಕ್ಷಿಸುವ ಕಾರ್ಯವನ್ನು ಕೈಗೊಂಡರು. 
೧೯೪೬ರಲ್ಲಿ ಅವರು ಬಂಗಾಳ ಶಾಸನಸಭೆಗೆ ಸ್ಪರ್ಧಿಸಿದರು. ಆದರೆ ಗೆಲ್ಲಲ್ಲಾಗಲಿಲ್ಲ. ನಂತರ ಅವರು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸಿಟಿಟ್ಯೂಟ್ ನಲ್ಲಿ ಕೆಲಸಕ್ಕೆ ಸೇರಿ, ನಿವೃತ್ತಿಯಾಗುವವರೆಗೆ ದುಡಿದರು. ವಿಭಜನೆಯಾದ ನಂತರ ತಮ್ಮ ಚಿತ್ತಗಾಂಗ್ ಅನ್ನು ಪ್ರೀತಿಸಿದರೂ, ಅವರು ಭಾರತದ ಜನರಿಗಾಗಿ ದುಡಿದರು. ಅವರು ದೇಶಪ್ರೇಮಿಯಾಗಿದ್ದರು, ಸಂಕುಚಿತ ರಾಷ್ಟ್ರೀಯತಾವಾದಿಯಾಗಿರಲಿಲ್ಲ.  ತಮ್ಮ ನಂತರದ ಪೀಳಿಗೆಯವರೊಂದಿಗೆ ಅವರು ಚಿತ್ತಗಾಂಗ್ ನ ಪ್ರಕೃತಿ ಸೌಂದರ್ಯದ ಬಗ್ಗೆ, ಗಣಿತದ ಬಗೆಗಿನ ತಮ್ಮ ಪ್ರೀತಿಯ ಬಗ್ಗೆ, ತಮ್ಮ ಸಂಗಾತಿಗಳು, ಸ್ನೇಹಿತರು, ಹಾಡುಗಳು, ಸಾಹಸಗಳು, ಚುನಾವಣೆಯಲ್ಲಿನ ಅವರ ಸೋಲಿನ ಬಗ್ಗೆ ಮಾತನಾಡುತ್ತಿದ್ದರು. “೭೦ರ ವಯಸ್ಸಿನಲ್ಲಿಯೂ ಸರಳವಾಗಿದ್ದ ಕಲ್ಪನಾರವರು ತಮ್ಮ ಹೆಗಲಿಗೆ ಚೀಲವನ್ನು ಹಾಕಿಕೊಂಡು, ಡಿಟಿಸಿ ಬಸ್ ನಲ್ಲಿ ೨೦ ವರ್ಷದ ಯುವತಿಯಂತೆ ಓಡಾಡುತ್ತಿದ್ದರು. ಅವರ ಭುಜ ಹೊರಗಡೆ ಬಂದಿತ್ತು. ಆದರೆ ಆ ನೋವನ್ನು ನಗುತ್ತಲೇ ಸಹಿಸಿದರು. ಅವರೆಂದೂ ಕಣ್ಣೀರನ್ನು ಹಾಕುತ್ತಿರಲಿಲ್ಲ, ಸರಳ ಜೀವನಕ್ಕೆ ಒಗ್ಗಿದ್ದರು. ಅವರು ತಮ್ಮ ಮಕ್ಕಳಿಗೆ ಜೋಗುಳವನ್ನು ಹಾಡುವಾಗಲೂ ಟಾಗೋರ್ ರವರ “ಏಕ್ಲಾ ಚಲೋರೆ” (ಒಬ್ಬರೇ ನಡೆಯಿರಿ) ಹಾಡುತ್ತಿದ್ದರು. ಅನ್ನವನ್ನುಣಿಸುವಾಗ ಧೈರ್ಯ ಮತ್ತು ದೃಢತೆಯನ್ನು ಕಲಿಸಿಕೊಟ್ಟರು. ನಿಮ್ಮ ಭಯವನ್ನು ಮೀರಿ. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ನಂಬಿ ಎಂಬುದನ್ನು ನಮಗೆ ಕಲಿಸಿದರು” ಎಂದು ಅವರ  ಮಗಳು ಹೇಳಿದ್ದಾರೆ. 
ತಮ್ಮ ಕೊನೆಯುಸಿರಿನವರೆಗೆ ಅವರು ದೇಶಕ್ಕಾಗಿ, ತುಳಿತಕ್ಕೊಳಪಟ್ಟ ಜನತೆಗಾಗಿ ದುಡಿಯುತ್ತಲೇ ಕಲ್ಕತ್ತಾದಲ್ಲಿ ೧೯೯೫ರ ಫೆಬ್ರವರಿಯ ೮ ರಂದು ತೀರಿಕೊಂಡರು. ಅವರ ಬದುಕು - ಹೋರಾಟಗಳು ನಮಗೆ ಎಂದೂ ಸಹ ಸ್ವಾತಂತ್ರ್ಯದ, ಜನಸೇವೆಯ ಪಾಠಗಳನ್ನು ಕಲಿಸುತ್ತಲೇ ಇರುತ್ತವೆ. 

ಏನಾದರೂ ಆಗು, ಮೊದಲು ಮಾನವನಾಗು -

{ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಂದು ಜಾತಿ, ಭಾಷೆ, ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ಜನರು ಪರಸ್ಪರರನ್ನು ದ್ವೇಷಿಸುತ್ತಿದ್ದಾರೆ, ಆ ದ್ವೇಷ ದಂಗೆಗಳಾಗಿ ಬದಲಾಗುತ್ತಿವೆ. ಯಾವುದೇ ರೀತಿಯ ಗಲಭೆಗಳಲ್ಲಿ ಹೆಚ್ಚು ಬಲಿಯಾಗುವುದು, ಹೆಣ್ಣುಮಕ್ಕಳೇ. ಹಾಗಾಗಿ ಎಲ್ಲಾ ರೀತಿಯ ವಿಚ್ಛಿದ್ರಕಾರಿ ಶಕ್ತಿಗಳನ್ನು ವಿರೋಧಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ಪ್ರೀತಿಯಿಂದ ಮಾತ್ರ ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಲು ಸಾಧ್ಯ. ಅಧಿಕಾರದ ಲಾಲಸೆಯಿಂದ, ಕೆಲವರು ಜನರಲ್ಲಿ ದ್ವೇಷದ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಆ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದು ನಮ್ಮೆಲ್ಲರನ್ನು ಬಲಿ ತೆಗೆದುಕೊಳ್ಳುವ ಮುನ್ನವೇ ಅದನ್ನು ಬುಡಸಮೇತ ಕಿತ್ತೊಗೆಯೋಣ. ಈ ಅಂಕಣದಲ್ಲಿ ಸಾಮಾರಸ್ಯದ ಬಗ್ಗೆ, ನಾವು ನೀವೆ¯್ಲರೂ ಮಹಾನರೆಂದು ಪರಿಗಣಿಸುವ ವ್ಯಕ್ತಿಗಳ ಬರಹಗಳನ್ನು ನೀಡುತ್ತಿದ್ದೇವೆ. ಈ ಬಾರಿ ಕನ್ನಡದ ಪ್ರಸಿದ್ಧ ಬರಹಗಾರರಾದ ಸಾಲಿ ರಾಮಚಂದ್ರರಾಯರ ಕವನಗಳನ್ನು ಕೊಡುತ್ತಿದ್ದೇವೆ.}

ರಕ್ತ ರುಚಿ 
ಶ್ವಾಪದಶೆ – ರಕ್ತ ರುಚಿ ನಿನಗಲ್ಲಾ
ಕಾಪಿಡುತೆ ಬಾಳು, ಕೊಲಬೇಡ, ಮನುಜಾ
ದಯೆಯ ಬೀಜವನು ನಿನ್ನೆದೆಯೊಳಿರಿಸಿದನು ಚಿ –
ನ್ಮಯನು; ಮೊಳೆಯಿಸಿ ನೀನು ಬೆಳೆಯಿಸದನು||
ಭಯಗೊಳಿಸಿ ಬದುಕುವನ ಬದುಕಿನಲಿ ಹುರುಳಿಲ್ಲ,
ಭಯದ ಸಂಗಡಿಗನಿಗೆ ಶಾಂತಿಯಿಲ್ಲಾ!
ಎದೆಮುಗುಳು ಪರಿಪಕ್ವವಾಗಿ ಪರಿಮಳದೆ ತುಂ
ಬುದೊಡೆ ಜೀವನಕಹುದು ಸೌಭಾಗ್ಯವು||
ಎದೆಮುಗುಳಿಗರಳಲಾಸ್ಪದವಿಲ್ಲ ದುರ್ಭಾವ
ವದರೊಳವಿತಿದ್ದವನು ಹೀರುತಿರಲು.
ಒಂದು ಮೆಟ್ಟಿಲು ಮುಂದೆ, ಮಾನವಾ, ಪಶುಜಾತಿ
ಯಿಂದೆ ನೀನಿರುವೆಯೆಂಬುದನು ಮರೆತು||
ಹಿಂದೆ ಸರಿದಾವ ಹುಳುಗಳ ಜೊತೆಗೆ ಬದುಕ
ಬೇಕೆಂದಿರುವೆ? ನರನು ಮುನ್ನಡೆಯಬೇಕು.
ಎಲ್ಲಿರುವುದು ಮದ್ದು?
ಎಲ್ಲಿರುವುದಯ್ಯ ಜಗದೊಳಗೆ ಮದ್ದು
ಬೆಲ್ಲವನು ಬೇವಾಗಿಸುವ ಬೇನೆಗೆ?
ಒಳ್ಳಿದರ ನುಡಿಗಳಿಗಪಾರ್ಥವನು ಹೇಳಿ ಹೆ
ಮ್ಮುಳ್ಳುಗಳನಿರಿಸುತ್ತೆ ಸತ್ಪಥದೊಳು||
ಸುಳ್ಳುಗಳ ಜಾಲವನು ಹರಹುತ್ತ ಜನಹಿತಕೆ –
ಕೊಳ್ಳಿಯಿಕ್ಕುವ ಮದಾಂಧರ ಬೇನೆಗೆ
ಮರಣ ಶಯ್ಯೆಯೊಳಿರುವ ಧರ್ಮವನು ಕಾಯಲವ
ತರಿಸಿದ ಮಹಾಜನರು ತಾವೆನ್ನುತೆ||
ಪರಿಪರಿಯ ಹಿಂಸೆಗಳನೆಸಗುತ್ತೆ ಹೆರರನೆ
ತ್ತರನು ಹೀರುವ ದುರಾತ್ಮರ ಬೇನೆಗೆ
ಉರಿವೆಂಕೆಯನು ಸೆರಗಿನೊಳು ಒಯ್ದು ಸೌಖ್ಯದಿಂ
ದಿರಬಯಸುವಾತ್ಮವಂಚಕರ ತೆರದೆ||
ಮರೆಮಾಚಿ ವಾಸ್ತವವನಿರದ ಸೌಜನ್ಯವನು
ಮೆರೆಯಿಸಲು ಹವಣಿಸುವರಿರ್ಬೇನೆಗೆ.

ಅನುವಾದಿತ ಕೃತಿ - ಮೂಗುಬೊಟ್ಟು – ಓಲ್ಗಾ (ತೆಲುಗಿನಿಂದ)

 [ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ಬಂದ ಉತ್ತಮ ಸಾಹಿತ್ಯ ಕೃತಿಗಳಲ್ಲಿ ಕೆಲವನ್ನಾದರೂ ಅನುವಾದಿಸಿ ನಮ್ಮ ಓದುಗರಿಗೆ ನೀಡಬೇಕೆಂಬುದು ನಮ್ಮ ಇಚ್ಛೆ. ಈ ರೀತಿಯಾಗಿ ಎಲ್ಲಾ ಭಾಷೆಗಳ ಸೊಗಡನ್ನು ಆಸ್ವಾದಿಸಬಹುದು. ಈ ಬಾರಿ ತೆಲುಗಿನ ಸುಪ್ರಸಿದ್ಧ ಲೇಖಕಿಯವರಾದ ಓಲ್ಗಾರವರ  “ಮೂಗುಬೊಟ್ಟು” (ರಾಜಕೀಯ ಕಥಲು ಕಥಾಸಂಕಲನದಿಂದ ಆರಿಸಿದ ಕಥೆ) ಎಂಬ ಕಥೆಯ ಅನುವಾದವನ್ನು ನೀಡುತ್ತಿದ್ದೇವೆ. ಓದುಗರಿಗೆ ಕಥೆ ಉತ್ತಮವೆನಿಸಿದರೆ ಅದರ ಕೀರ್ತಿ ಮೂಲ ಲೇಖಕರಿಗೆ ಸೇರುತ್ತದೆ. ಉತ್ತಮವಲ್ಲವೆನಿಸಿದರೆ ಅದು ಅನುವಾದಕರ ಜವಾಬ್ದಾರಿಯಾಗಿರುತ್ತದೆ] 
ಮತ್ತೆ ಗಂಡಿನ ಕಡೆಯವರು ಬರುತ್ತಾರಂತೆ. ರಮಳಿಗೆ ತನ್ನೊಳಗೆ ಏನೋ ಗಡ್ಡೆಕಟ್ಟುತ್ತಿರುವಂತೆ ಅನಿಸುತ್ತಿದೆ. ಆಗಲೇ 6 ವರ್ಷಗಳಾಗಿದೆ. ವರ್ಷಕ್ಕೆ 5-6 ಸಾರಿಗಿಂತ ಕಡಿಮೆಯೆನ್ನದೆ, ಗಂಡುಗಳು ಬರುತ್ತಲೇ ಇದ್ದಾರೆ. ರಮ ಪಿಯುಸಿ 2ನೇ ವರ್ಷದಲ್ಲಿರುವಾಗಲೇ ಇದು ಆರಂಭವಾಗಿದೆ.  ರಮ ಬಿಎ ಪಾಸಾಗಿ 2 ವರ್ಷದಿಂದ ಕೆಲಸ ಮಾಡುತ್ತಿದ್ದಾಳೆ. 
ರಮ ನೋಡಲು ಚೆನ್ನಾಗಿಯೇ ಇದ್ದಾಳೆ. ಗೋಧಿಬಣ್ಣ. ಕಳೆ ಇರುವ ಮುಖ. ಮೂಗು ಸ್ವಲ್ಪ ದೊಡ್ಡದಾದರೂ ಉದ್ದವಾಗಿರುವ ಚಂದದ ಮೂಗು ಎನಿಸಿಕೊಳ್ಳುವುದಿಲ್ಲ. ಉದ್ದ ಜಡೆ, ಎತ್ತರಕ್ಕೆ ತಕ್ಕ ದಪ್ಪ, ಚೆನ್ನಾಗಿಯೇ ಇದ್ದಾಳೆ ರಮ.
ಆದರೆ ವಾಸ್ತವ ಸಮಸ್ಯೆ ಬೇರೆಯೇ ಇದೆ. ಬಂದು ಹೋದವರಿಗೆಲ್ಲ ಹುಡುಗಿ ಇಷ್ಟವಾಗಲಿಲ್ಲ ಅಂತಲ್ಲ. ಹುಡುಗಿ ಇಷ್ಟವಾದಳಾ ಇಲ್ಲವಾ ಎನ್ನುವುದು ಬಹಳ ಕಡಿಮೆ ಸಾರಿ ಬರುತ್ತದೆ. ಇಷ್ಟವಾಗದಿರುವುದು ರಮ ತಂದೆ ಕೊಡುವ ವರದಕ್ಷಿಣೆಯಲ್ಲಿಯೇ. ನಿಜವಾದ ಸಮಸ್ಯೆ ಅದು.
ಸಮಸ್ಯೆ ಏನೆಂದು ಅರ್ಥವಾದರೆ, ನಿಜವಾದ ಸಮಸ್ಯೆ ಎಲ್ಲಿದೆಯೊ ಗುರ್ತಿಸಿದರೆ ಪ್ರಪಂಚದಲ್ಲಿ ಸಮಸ್ಯೆಗಳಿಗೆಲ್ಲ ಸರಳವಾಗಿಯೇ ಉತ್ತರ ಸಿಗುತ್ತದೆ. 
ಒಂದು ಸಮಸ್ಯೆಗೆ ಎಷ್ಟೋ ವಿಧದ ಕೋನಗಳು, ಛಾಯೆಗಳು. ಸಮಸ್ಯೆ ಒಂದು ಕಡೆ ಇದ್ದರೆ ಅದರ ನೆರಳು ಇನ್ನೊಂದು ಕಡೆ ಕಾಣಿಸಿಕೊಳ್ಳುತ್ತದೆ. ನೆರಳನ್ನೇ ನಾವು ಸಮಸ್ಯೆ ಎಂದುಕೊಂಡು ನಾವು ಅದನ್ನು ಹಿಡಿದುಕೊಳ್ಳಲೆತ್ನಿಸುತ್ತೇವೆ. ಹಾಗೆಯೇ ರಮಳ ಮದುವೆ ಸಮಸ್ಯೆ ಕೂಡ ಅವಳ ಮೂಗಿನ ಮೇಲೆ ನಿಂತಿತು.
ರಮಗೆ ಚಿಕ್ಕಂದಿನಲ್ಲಿ ಅವರ ಅಜ್ಜಿ, ಕಿವಿಗಳ ಜೊತೆಗೆ ಮೂಗು  ಚುಚ್ಚಿಸಿದರು. ಮೂರು ವರ್ಷದ ರಮ ಜೋರಾಗಿ ಅಳುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು, ಆದರೆ ಸಾಧ್ಯವಾಗಲಿಲ್ಲ. ಮೂಗು ಚುಚ್ಚಿದರು. ರಮ ಹಿಂದೆ ಬರಲು ಪ್ರಯತ್ನಿಸಿದ್ದರಿಂದ ಎರಡು ಕಡೆ ತೂತುಗಳು ಬಿದ್ದವು. ಮತ್ತೆ ಅಜ್ಜಿ ರಮಳ ಕಾಲು ಕೈಗಳನ್ನು ಒತ್ತಿ ಹಿಡಿದರೆ, ಎರಡೂ ತೂತುಗಳನ್ನು ಸೇರಿಸಿ, ಒಂದು ದೊಡ್ಡ ತೂತು ಮಾಡಿದ ಮೂಗು ಹೊಲಿಯುವ ಹುಡುಗ.
ನಂತರ ಕಿವಿಗಾದ ಗಾಯ ಬೇಗ ವಾಸಿಯಾಯಿತು ಆದರೆ ಮೂಗು ವಾಸಿಯಾಗಲಿಲ್ಲ. ಜ್ವರ ಬಂದಿತು. ಹದಿನೈದು ದಿನಗಳು ಮಗುವನ್ನು ಹಿಂಡಿ ಹಿಪ್ಪೆ ಮಾಡಿದ ನಂತರ ಜ್ವರ ವಾಸಿಯಾಯಿತು.
ಅಜ್ಜಿ ತನ್ನ ಮೂಗುಬೊಟ್ಟು ರಮನಿಗೆಂದು ಹೇಳಿಬಿಟ್ಟಳು. ರಮನಿಗೆ 10 ವರ್ಷವಿದ್ದಾಗ ಅಜ್ಜಿ ಸತ್ತರೆ, ಅದನ್ನು ರಮನ ಮೂಗಿಗಿಟ್ಟಳು ಅವಳ ತಾಯಿ. ಶಾಲೆಯಲ್ಲಿ ಎಲ್ಲರೂ ಆಡಿಕೊಂಡರೆಂಬ ಕಾರಣದಿಂದ ಅದನ್ನು ತೆಗೆದು ಪೆಟ್ಟಿಗೆಯಲ್ಲಿಟ್ಟಳು ರಮ. 
ಆದರೆ ಮೂಗಿನಲ್ಲಿ ತೂತು ಹಾಗೆಯೇ ಇತ್ತು. ಅಲ್ಲಿ ಬಿದ್ದ ಕಪ್ಪು ಮಚ್ಚೆ ಕೂಡ ಹಾಗೆಯೇ ನಿಂತುಬಿಟ್ಟಿತು. ರಮ ಕಾಲೇಜಿನಲ್ಲಿ ಸೇರುವಾಗ ಮೂಗುಬೊಟ್ಟು ಹಳೆಯದಾಯಿತು. ಅವಳ ಜೊತೆಯವರಾರೂ ಮೂಗು ಚುಚ್ಚಿಸಿಕೊಂಡಿರಲಿಲ್ಲ.
ಬಹಳಷ್ಟು ಜನ ರಮಳ ಮೂಗನ್ನು, ಅಲ್ಲಿದ್ದ ಮಚ್ಚೆಯನ್ನು ಅದೇ ಕೆಲಸವಾಗಿ ನೋಡುತ್ತಿದ್ದರು. ಅದೊಂದೇ ಕಣೇ ದೃಷ್ಟಿಬೊಟ್ಟು ಎನ್ನುತ್ತಿದ್ದರು.
“ಅದು ಇದ್ದರೆ ಏನೀಗ, ಗಾಳಿ ತೆಗೆದುಕೊಳ್ಳಲಂತೂ ಏನೂ ಅಡ್ಡಿ ಇಲ್ಲ. ವಾಸನೆ ನೋಡಲು ಅಡ್ಡಿ ಇಲ್ಲ. ಮೂಗಿಗೆ ಸಂಬಂಧಿಸಿದ ಏನೂ ಖಾಯಿಲೆ ಇಲ್ಲ. ಕನಿಷ್ಟ ನಾಲ್ಕು ವರ್ಷಕ್ಕೊಮ್ಮೆ ನೆಗಡಿಯೂ ಆಗದು, ನನ್ನ ಮೂಗಿಗೇನು, ಅದು ಬಂಗಾರ” ಎನ್ನುತ್ತಿದ್ದಳು ರಮ.
“ಉಳಿದವಕ್ಕೆ ಅಡ್ಡಿಯಾಗುವುದಿಲ್ಲ ನಿಜ, ಆದರೆ ನಾಳೆ ನಿನ್ನ ಮದುವೆಗೆ ಅಡ್ಡ ಬರುತ್ತದೆ ನೋಡುತ್ತಿರು” ಎಂದಳು ಶೈಲ.
ಶೈಲಳನ್ನು ಎಲ್ಲರು ’ಚಪ್ಪಟ್ಟೆ ಮೂಗ” ಎನ್ನುತ್ತಿದ್ದರು.
ಶೈಲ ಅಂತಾನೇ ಅಲ್ಲ, ಎಲ್ಲರೂ ತಮ್ಮ ಅಂಗಾಂಗಗಳನ್ನು – ಮುಖ್ಯ ಮುಖ – ಎಲ್ಲಾ ರೀತಿಯಲ್ಲೂ ಸರಿಯಾಗಿದೆಯಾ, ಇಲ್ಲವೊ ಎಂದು ಪರೀಕ್ಷಿಸಿಕೊಳ್ಳುತ್ತಿದ್ದರು. ಅದರ ಭಾಗವಾಗಿ ಮೂಗಿನ ಬಗ್ಗೆಯೂ ಭಯಪಡುತ್ತಿದ್ದರು. ಒಬ್ಬಳು ಹುಡುಗಿಗೆ ಮೂಗು ಉದ್ದ ಎಂದು ಯೋಚನೆಯಾದರೆ, ಇನ್ನೊಬ್ಬಳಿಗೆ ದಪ್ಪವಾಗಿದೆ ಎಂದು ಭಯ. ಇನ್ನೊಬ್ಬಳಿಗೆ ಅದು ಸೊಟ್ಟ ಎಂದು ಭಯ. ಇನ್ನೊಬ್ಬಳಿಗೆ ಅದು ಕೆಳಗೆ ವಾಲಿದೆ ಎಂದು ಭಯ. ಎಲ್ಲರ ಮನಸ್ಸಲ್ಲಿ ಒಂದು ಮೂಗು ಇದ್ದೇ ಇತ್ತು.
ನೀಳವಾಗಿ, ಸಣ್ಣದಾಗಿ, ಸೂಜಿಯಂತೆ ಇರುವ ಮೂಗು ಕವಿಗಳು ವರ್ಣಿಸುವ ಮೂಗು.
“ಅಂತಹ ಮೂಗಿದ್ದರೆ ಎಷ್ಟು ಚೆನ್ನ” ಎಂದಳು ಮಲ್ಲಿಕ, ತೆಲುಗು ಮೇಷ್ಟ್ರು ಮೂಗು ಕವಿತೆಯನ್ನು ಓದಿ ವರ್ಣಿಸಿದಾಗ.
ಸಂಪಂಗಿ ಮೊಗ್ಗಿನ ತರಹದ ಮೂಗು.
ಕಥೆಯಲ್ಲಿ ಕಾದಂಬರಿಗಳಲ್ಲಿ ನಾಯಕಿಯರಿಗಿರುವ ಸುಂದರ ಮೂಗು.
ತಮಗಿಲ್ಲದ ಆ ಮೂಗಿನ ಬಗ್ಗೆ ಯೋಚಿಸುತ್ತಲೇ ಹೆಣ್ಣುಮಕ್ಕಳು ತಮ್ಮ ಮೂಗಿನ ಮೇಲೆ ಅಸಂತೃಪ್ತಿ ಬೆಳೆಸಿಕೊಳ್ಳುವುದನ್ನು ನೋಡಿ ರಮಾಗೆ ಕೋಪ. ಆದರೆ ತನ್ನ ಮೂಗೇ ತನಗೆ ಸಮಸ್ಯೆಯಾಗುತ್ತದೆಂದು ನಿಧಾನವಾಗಿ ಆಕೆಗೆ ತಿಳಿಯಿತು.
ಸಾಲಾಗಿ ನಾಲ್ಕು ಗಂಡಿನ ಕಡೆಯವರು ರಮಳ ಮೂಗಿನ ಬಗ್ಗೆ, ಆ ಮಚ್ಚೆಯ ಬಗ್ಗೆ ಮಾತಾಡುವಷ್ಟರಲ್ಲೇ ಮನೆಯಲ್ಲಿ ಎಲ್ಲರಿಗೂ ಭಯ ಹುಟ್ಟಿಕೊಂಡಿತು.
ಮೂಗು ಚುಚ್ಚಿಸಿದ ಅಜ್ಜಿಗೆ ಶಾಪ ಹಾಕಿದರು ರಮಾ ತಾಯಿ.
ಐದನೇ ಗಂಡಿನ ಕಡೆಯವರು, “ಹಣದಲ್ಲೇನಿದೆ ಬಿಡಿ. ನಮ್ಮ ಹುಡುಗನಿಗೆ ಸೌಂದರ್ಯ ಮುಖ್ಯ. ನಿಮ್ಮ ಹುಡುಗಿಯದು ಗೋಧಿ ಬಣ್ಣ. ಮೇಲಾಗಿ ಮೂಗಿನ ಮೇಲೆ ಅದೊಂದು” ಅಂತ ಹೇಳಿದ ಮೇಲೆ, ಆ ತೂತನ್ನು ಹೇಗಾದರೂ ಮುಚ್ಚಿಸಿಬಿಡಬೇಕೆಂದುಕೊಂಡರು ಅವರ ತಂದೆ.
ರಮ 2ನೇ ಬಿ ಎ ಓದುತ್ತಿರುವಾಗ ಗುಂಟೂರಿನ ದೊಡ್ಡ ಸರ್ಜನ್ ಹತ್ತಿರ ಹೋಗಿ ಆ ಮಚ್ಚೆ ಇಲ್ಲದಂತೆ ಸರ್ಜರಿ ಮಾಡಿಸಿದರು ರಮಳಿಗೆ.
ಮಚ್ಚೆಯಿಲ್ಲದ ಮೂಗು ತನ್ನನ್ನು ಎಕ್ಕರಿಸುತ್ತಿರುವಂತೆ ಅನಿಸಿತು ರಮಗೆ
ವರ್ಷಗಳಗಟ್ಟಲೆ ಅಭ್ಯಾಸವಾಗಿದ್ದ ಆ ಮಚ್ಚೆ ರಮಾಳ ಶರೀರದ ಭಾಗವಾಗಿಬಿಟ್ಟಿತ್ತು. ಅದಿಲ್ಲದಿದ್ದರೆ ಕೆಲವೊಮ್ಮೆ ರಮಾಗೆ ಏನೋ ಕಳೆದುಕೊಂಡಂತೆನಿಸಿತ್ತು.
’ಆದರೂ ಸಹ, ಹೋಗಲಿ ಬಿಡು, ಇನ್ನೇನೂ ಕೊಂಕು ತೆಗೀತಾರೆ” ಅಂದುಕೊಂಡಳು.
ಸ್ನೇಹಿತೆಯರೆಲ್ಲ ಸಂತೋಷಿಸಿದರು. “ಇನ್ನು ನಿನ್ನ ಮದುವೆ ಆಗಿಬಿಡುತ್ತದೆ ಬಿಡು” ಎಂದರು. 
ಮದುವೆಗಾಗಿ ಹೆಣ್ಣುಮಕ್ಕಳು ಸಾಧ್ಯವಾದರೆ ತಮ್ಮ ಪ್ರತಿಯೊಂದು ಅಂಗವನ್ನೂ ಬದಲಾಯಿಸಿಕೊಂಡುಬಿಡಬೇಕೇನೊ ಆ ಹುಡುಗನ ಕಡೆಯವರಿಗೆ ಇಷ್ಟವಾಗುವಂತೆ ಎಂದುಕೊಂಡಳು ರಮ.
ಬೆಳ್ಳಗಿದ್ದ ಶೋಭಾಳನ್ನು “ಅದೇನು ಬಿಳುಪಮ್ಮ, ಹುಚ್ಚು ಬಿಳುಪು, ಒಂಚೂರು ಕಳೆಕಾಂತಿ ಇಲ್ಲ” ಎಂದರು.
ತಮ್ಮ ಎದುರಿಗೆ ಒಂದು ಹೆಣ್ಣುಮಗಳು ಮದುವೆಗಾಗಿ ಕುಳಿತುಕೊಂಡಿದ್ದಾಳೆಂದರೆ ಹುಡುಗನ ಕಡೆಯವರ ಕಣ್ಣುಗಳಿಗೆ ಏನೋ ಖಾಯಿಲೆ ಬರುತ್ತದೆಂದು ರಮನಿಗೆ ದೃಢ ನಂಬಿಕೆ ಬಂದುಬಿಟ್ಟಿತು.
ರಮಳ ಬಿಎ ಮುಗಿಯಿತು. 2 ವರ್ಷದಿಂದ ಟೈಪಿಸ್ಟ್ ಕೆಲಸ ಮಾಡುತ್ತಿದ್ದಾಳೆ. ಆದರೂ ಸಂಬಂಧ ಕುದುರಲಿಲ್ಲ. ಪ್ರಯತ್ನಗಳು ನಿಲ್ಲಲಿಲ್ಲ. ಆ 2 ವರ್ಷಗಳಲ್ಲಿ ಒಬ್ಬಳು ಸಿನಿಮಾ ತಾರೆಂiÀi ದೆಸೆಯಿಂದ ಮೂಗುಬೊಟ್ಟು ಮತ್ತೆ ¥sóÁ್ಯಷನ್ ಆಯಿತು. ಹೆಣ್ಣುಮಕ್ಕಳೆಲ್ಲ ಮೂಗು ಚುಚ್ಚಿಸಿಕೊಳ್ಳಲಾರಂಭಿಸಿದರು. ತನ್ನ ಮೂಗಿನ ತೂತನ್ನು ನೋಡಿ ನಕ್ಕವರೆಲ್ಲ ಈಗ ಮೂಗು ತೂತು ಮಾಡಿಕೊಳ್ಳುತ್ತಿದ್ದರೆ ರಮಾಗೆ ಆಶ್ಚರ್ಯವಾಯಿತು.
ಇಂದು ಬರುತ್ತಿರುವ ಸಂಬಂಧದ ಬಗ್ಗೆ ಎಲ್ಲರಿಗೂ ಆಶೆಯಿದೆ. ಹುಡುಗ ಕಾಲೇಜಿನಲ್ಲಿ ಉಪನ್ಯಾಸಕ. ವರದಕ್ಷಿಣೆ 25000 ಸಾಕೆಂದು ಒಪ್ಪಿಕೊಂಡಿದ್ದಾನೆ.  ಹುಡುಗನಿಗೆ ಒಬ್ಬಳೇ ಅಕ್ಕ. ಆ ಅಕ್ಕ ಮೂರು ವರ್ಷದಿಂದ ರಮ್ಮಾಳ ಮನೆಯ ಪಕ್ಕದಲ್ಲಿ ಬಾಡಿಗೆಗಿದ್ದಾರೆ. ಅವಳ ಹೆಸರು ಸಾವಿತ್ರಿ. ಸಾವಿತ್ರಿ ತಾನೇ ಮುಂದೆ ಬಂದು ಈ ಸಂಬಂಧ ಬಹಳಷ್ಟರವರೆಗೆ ಖಾಯಂ ಎನ್ನುವಂತೆ ಆಗಿತ್ತು. ಹುಡುಗನ ¥sóÉÇೀಟೊ ಹುಡುಗಿ, ಹುಡುಗಿ ¥sóÉÇೀಟೊ ಹುಡುಗ ನೋಡಿದ್ದರು. ಹುಡುಗ ಒಂದೆರಡು ಬಾರಿ ಸಾವಿತ್ರಿಯ ಮನೆಗೆ ಬಂದಾಗ ರಮಾ ಹಠಾತ್ತಾಗಿ ಕಾಣಿಸಿಕೊಂಡು ಮಾಯವಾಗಿದ್ದಳು ಕೂಡ. ಹುಡುಗ ಸತ್ಯನಾರಾಯಣ ನಾಮಕಾವಸ್ತೆಗೆ ನೋಡಲು ಬರಬೇಕಿತ್ತಷ್ಟೇ ಹೊರತು ಹುಡುಗಿ ಬೇಡವೆನ್ನಲು ಅಲ್ಲ ಎಂಬುದು ಎಲ್ಲರ ನಂಬಿಕೆಯಾಗಿತ್ತು.
ಆದರೂ ಎಲ್ಲರಲ್ಲಿ ಏನೋ ಭಯ.
“ಇನ್ನು ಸ್ವಲ್ಪ ಬಣ್ಣವಿದ್ದಿದ್ದರೆ ಇಷ್ಟು ಸಮಸ್ಯೆ ಇರುತ್ತಿರಲ್ಲಿಲ”್ಲ ಗೊಣಗಿಕೊಂಡಳು ತಾಯಿ.
ರಮಾಗೆ ಹೆಚ್ಚಿನ ಉತ್ಸಾಹ ಇರಲಿಲ್ಲ. ಮಾಮೂಲಾಗಿ ತಯಾರಾಗುವಂತೆಯೇ ಸಿದ್ಧಳಾದಳು. ಎಲ್ಲ ಮುಗಿಯಿತು. ಅವರು ಸಂತೋಷವಾಗಿಯೇ ಹೋದರು. ಹತ್ತು ದಿನಗಳಲ್ಲಿ ನಿಶ್ಚಿತಾರ್ಥಕ್ಕೆ ಸಿದ್ಧಮಾಡುವಂತೆ ಹೇಳಿದರು. ರಮಾಗೆ ತಲೆಯ ಮೇಲಿಂದ ಭಾರವಿಳಿದಂತೆನಿಸಿತು. ಚೆನ್ನಾಗಿ ಊಟ ಮಾಡಿ ಸಾಯಂಕಾಲದವರೆಗೆ ನಿದ್ದೆ ಮಾಡಿದಳು. ಐದು ಘಂಟೆಗೆ ಸಾವಿತ್ರಿ ಬಂದು ಎಬ್ಬಿಸಿದಳು.
“ಎದ್ದೇಳು, ನಿದ್ದೆಯಲ್ಲಿ ನನ್ನ ತಮ್ಮನನ್ನು ಮೀರಿಸುವಂತಿದ್ದೀಯಾ” ಎನ್ನುತ್ತಾ.
ರಮಾ ನಾಚಿಕೆಪಡುತ್ತಾ ಎದ್ದಳು
“ಈಗ ನೀನು ಅರ್ಜೆಂಟಾಗಿ ಮಾಡಬೇಕಾದ ಕೆಲಸವೊಂದಿದೆ” ಎಂದಳು ಸಾವಿತ್ರಿ.
“ಏನು?” ಎಂದಳು ರಮ ಆಕಳಿಸುತ್ತಾ. “ಮೂಗು ಚುಚ್ಚಿಸಿಕೊಳ್ಳಬೇಕು.”
ಆಕಳಿಗೆ ಮುಗಿದರೂ ರಮಳ ಬಾಯಿ ಮುಚ್ಚಿಕೊಳ್ಳಲಿಲ್ಲ.
“ನನ್ನ ತಮ್ಮನಿಗೆ ಮೂಗುಬೊಟ್ಟು ಎಂದರೆ ಬಹಳ ಇಷ್ಟ. ಮೂಗುಬೊಟ್ಟು ಇಲ್ಲದ ಹೆಣ್ಣುಮಗಳ ಮೂಗಿಗೆ ಅಂದವೇ ಇರುವುದಿಲ್ಲವಂತೆ. ಎಲ್ಲಾ ಚೆನ್ನಾಗಿದೆ ಆದರೆ ಆ ಹುಡುಗಿಗೆ ಮೂಗುಬೊಟ್ಟೇ ಇಲ್ಲಕ್ಕ ಅಂದ. ಅದೆಷ್ಟು ಕೆಲಸವೊ ಎಂದೆ ನಾನು. ನಿನಗೆ 20000ಕ್ಕಿಂತ ಕಡಿಮೆಯಾಗದ ಮೂಗುಬೊಟ್ಟು ಮಾಡಿಸುತ್ತಾನಂತೆ. ಅದೃಷ್ಟ ಎಂದರೆ ನಿನ್ನದೇ ನೋಡು. ಎದ್ದೇಳು, ಮೂಗು ಚುಚ್ಚಿಸಿಕೊಂಡುಬರೋಣ ನಡೆ” ಎಂದು ಸಾವಿತ್ರಿ ಬೇಗಬೇಗ ಮಾತನಾಡಿದಳು.
“ನಾನು ಮೂಗು ಚುಚ್ಚಿಸಿಕೊಳ್ಳುವುದಿಲ್ಲ. ಈ ಮದುವೆ ನಿಂತುಹೋದರೂ ಸರಿಯೇ” ರೋಷದಿಂದ ಕೋಪದಿಂದ ರಮಳ ಮೂಗು ಅದುರುತ್ತಿತ್ತು.
ಅವು ಅಂದವಾಗಿದ್ದವೊ ಇಲ್ಲವೊ ಹೇಳುವರಾರು!!      

ಶಿಕ್ಷಣದ ಅಂಕಣ – ಒಬ್ಬ ಶಿಕ್ಷಕಿಯ ಕಾರಣದಿಂದ

[F CAPÀtzÀ°è £ÁªÀÅ ²PÀët ºÉÃVgÀ¨ÉÃPÀÄ, ²PÀëtzÀ GzÉÝñÀ K£ÁVgÀ¨ÉÃPÀÄ, ²PÀëPÀgÀ,  «zÁåyðUÀ¼À, ¥ÉÇõÀPÀgÀ PÀvÀðªÀåUÀ¼ÉãÀÄ JA§ÄzÀgÀ §UÉÎ ²PÀëtvÀdÕgÀ C©ü¥ÁæAiÀÄUÀ¼À£ÀÄß ¤ÃqÀÄwÛzÉÝêÉ. EA¢£À ²PÀët ªÀåªÀ¸ÉÜAiÀİè£À zÉÆÃµÀUÀ¼À£ÀÄß w¢ÝPÉÆ¼ÀÄîªÀ°è F ¯ÉÃR£ÀUÀ¼ÀÄ G¥ÀAiÀÄÄPÀÛªÁUÀĪÀÅzÁzÀgÉ £ÀªÀÄä ¥ÀæAiÀÄvÀß ¸ÁxÀðPÀ. F ¨Áj ಅಮೇರಿಕಾದಲ್ಲಿ ನಡೆದ ಒಂದು ನಿಜ ಘಟನೆಯನ್ನು ¤ÃqÀÄwÛzÉÝêÉ.]
ಬಹಳ ವರ್ಷಗಳ ಹಿಂದೆ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರೊಫ಼ೆಸರ್ ಒಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಒಂದು ಕೆಲಸವನ್ನು ಕೊಟ್ಟರು. ಕೊಳೆಗೇರಿಗಳಿಗೆ ಹೋಗಿ. ೧೨-೧೬ ವರ್ಷದ ೨೦೦ ಹುಡುಗರನ್ನು ತೆಗೆದುಕೊಂಡು, ಅವರ ಕೌಟುಂಬಿಕ ಹಿನ್ನೆಲೆ, ಪರಿಸರದ ಬಗ್ಗೆ ಅಧ್ಯಯನ ನಡೆಸಿ. ಅವರು ಭವಿಷ್ಯದಲ್ಲಿ ಏನಾಗಬಹುದೆಂಬುದನ್ನು ಊಹಿಸಿ ಎಂದು ಹೇಳಿದರು. ವಿದ್ಯಾರ್ಥಿಗಳು ಅದೇ ರೀತಿ ತಮ್ಮ ಅಧ್ಯಯನವನ್ನು ನಡೆಸಿ, ಅದರಲ್ಲಿ ಬಹುತೇಕರು ಖಚಿತವಾಗಿ ಒಂದಲ್ಲ ಒಂದು ಸಮಯದಲ್ಲಿ ಜೈಲಿನಲ್ಲಿರುತ್ತಾರೆಂದು ತಮ್ಮ ಅಧ್ಯಯನದ ವರದಿಯಾಗಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದರು.
೨೫ ವರ್ಷಗ ನಂತರ ಅದೇ ವಿಶ್ವವಿದ್ಯಾನಿಲಯದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳಿಗೆ, ಮೊದಲ ಗುಂಪಿನ ವಿದ್ಯಾರ್ಥಿಗಳ ಊಹೆ ಸರಿಯಿದೆಯೆ, ಇಲ್ಲವೇ ಎಂದು ಪರಿಶೀಲಿಸಲು ಹೇಳಲಾಯಿತು. ೨೦೦ ಜನರಲ್ಲಿ ಕೆಲವರು ತೀರಿಕೊಂಡಿದ್ದರು, ಕೆಲವರು ಅಲ್ಲಿಂದ ಬೇರೆಡೆ ಹೋಗಿದ್ದರು. ೧೮೦ ಜನರನ್ನು ಮಾತ್ರ ಸಂಪರ್ಕಿಸಲಾಯಿತು. ಅದರಲ್ಲಿ ಕೇವಲ ಜನರು ಮಾತ್ರ ಜೈಲಿಗೆ ಹೋಗಿದ್ದರೆಂಬುದು ತಿಳಿದುಬಂತು. ಅದು ಆಶ್ಚರ್ಯಜನಕವಾಗಿತ್ತು.  
ಅಪರಾಧವೇ ತುಂಬಿರುವ ವಾತಾವರಣದಲ್ಲಿ ಬದುಕಿದ್ದರೂ ವ್ಯಕ್ತಿಗಳು ಒಳ್ಳೆಯ ಜೀವನ ಹೇಗೆ ನಡೆಸುತ್ತಿದ್ದಾರೆ  ಎಂದು ಕೇಳಿದಾಗ ಬಂದ ಉತ್ತರ: “ಒಬ್ಬ ಶಿಕ್ಷಕಿ ಕಾರಣದಿಂದ. ಸಂಶೋಧನಾರ್ಥಿಗಳು ಬಗ್ಗೆ ನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲೆತ್ನಿಸಿದಾಗ, ಶೇಕಡ ೭೫ರಷ್ಟು ವಿದ್ಯಾರ್ಥಿಗಳು ಒಬ್ಬ ಶಿಕ್ಷಕಿಯ ಬಗ್ಗೆ ಪ್ರಸ್ತಾಪ ಮಾಡಿದ್ದು ಕಂಡು ಬಂದಿತು.
ಸಂಶೋಧನಾ ವಿದ್ಯಾರ್ಥಿಗಳು ಶಿಕ್ಷಕಿಯ ವಿಳಾಸವನ್ನು ತಿಳಿದುಕೊಂಡು ಆಕೆಯ ಬಳಿ ಹೋದರು. ಗುಂಪಿನ ಮಕ್ಕಳ ಮೇಲೆ ನೀವು ಅಂತಹ ಪ್ರಭಾವವನ್ನು ಬೀರಲು ಹೇಗೆ ಸಾಧ್ಯವಾಯಿತು? ಅಂತಹ ವಿಶೇಷ ವಿಧಾನವನ್ನೇನು ಬಳಸಿದಿರಿ? ಎನ್ನುವ ಪ್ರಶ್ನೆಗಳಿಗೆ ಆಕೆ ಹುಡುಗರು ನನ್ನನ್ನು ನೆನಪಿಸಿಕೊಳ್ಳಲು ಏನು ಕಾರಣವಿರಬಹುದು, ನಾನೇನೂ ವಿಶೇಷ ವಿಧಾನಗಳನ್ನು ಬಳಸಿಲ್ಲ ಎಂದರು. ಇಲ್ಲ ಮೇಡಮ್ ಏನೋ ವಿಶೇಷವಾದದ್ದು ಇರಬಹುದು, ಯೋಚಿಸಿ ಹೇಳಿ ಎಂದರು. ಆಕೆ ನಿಧಾನವಾಗಿ ಯೋಚಿಸುತ್ತಾ ಹೇಳಿದರಾಕೆ, “ನಾನು ಹುಡುಗರನ್ನು ತುಂಬಾ ಪ್ರೀತಿಸುತ್ತಿದ್ದೆ !!

ಮಹಿಳೆಯರನ್ನು ಮುನ್ನಡೆಸಿದ ಮಹನೀಯರು – ಪ್ರೇಮ್ ಚಂದ್

ಹಿಂದಿ ಮತ್ತು ಉರ್ದು ಸಾಮಾಜಿಕ ಸಾಹಿತ್ಯದ ಆರಂಭಕರ್ತರಾದ ಪ್ರೇಮ್ ಚಂದ್ ರವರು ಅಜೈಬ್ ರಾಯ್ ಮತ್ತು ಆನಂದಿ ದೇವಿಯವರಿಗೆ ನಾಲ್ಕನೆ ಮಗುವಾಗಿ ಜನಿಸಿದರು. ಮೊದಲಿಗೆ, ಲಾಲ್‍ಪುರದ ಮದ್ರಸದಲ್ಲಿ ಶಿಕ್ಷಣ, ಪರ್ಶಿಯನ್ ಮತ್ತು ಉರ್ದು ಕಲಿತರು. ನಂತರ ಮಿಷನರಿ ಶಾಲೆಯಲ್ಲಿ ಇಂಗ್ಲಿಷ್ ಕಲಿತರು. 8ನೇ ವಯಸ್ಸಿಗೆ ತಾಯಿಯ ಮರಣ ಮತ್ತು ತಂದೆಯ ಮರುವಿವಾಹದೊಂದಿಗೆ ಸಮಸ್ಯೆಗೆ ಒಳಗಾದರು. ಮಲತಾಯಿಯೊಂದಿಗೆ ಉತ್ತಮ ಸಂಬಂಧವಿರಲಿಲ್ಲ. ಒಂಟಿತನ ಅನುಭವಿಸಿದ ಅವರು ಪುಸ್ತಕಗಳನ್ನು ಓದುತ್ತಾ ತಮ್ಮ ನೋವನ್ನು ಮರೆಯಲಾರಂಭಿಸಿದರು. ತಂದೆ 1897ರಲ್ಲಿ ತೀರಿಕೊಂಡಾಗ ಕುಟುಂಬದ ಜವಾಬ್ದಾರಿಯನ್ನು ಹೊರಲು ಅವರು ತಮ್ಮ ಓದನ್ನು ಬಿಡಬೇಕಾಗಿ ಬಂದಿತು. ಕೆಲವು ವರ್ಷಗಳ ಕಾಲ ಟ್ಯೂಷನ್ ಟೀಚರ್ ಆಗಿ ಕಷ್ಟಪಟ್ಟರು. 1900 ರಲ್ಲಿ ಬಹ್ರೆಚ್‍ನಲ್ಲಿ ಸರ್ಕಾರಿ ಜಿಲ್ಲಾ ಶಾಲೆಯಲ್ಲಿ ಅಸಿಸ್ಟೆಂಟ್ ಟೀಚರ್ ಆಗಿ ಕೆಲಸ ಸಿಕ್ಕಿತು. ಅದೇ ಸಮಯದಲ್ಲಿ ನವಾಬ್ ರಾಯ್ ಎನ್ನುವ ಹೆಸರಿನಲ್ಲಿ ಬರೆಯಲಾರಂಭಿಸಿದರು. 
ಪುಸ್ತಕಗಳನ್ನು ಮಾರುವ ಕೆಲಸವನ್ನು ಮಾಡಿ ಆ ಮೂಲಕ ಬಹಳ ಪುಸ್ತಕಗಳನ್ನು ಓದಲು ಅವಕಾಶವನ್ನು ಕಲ್ಪಿಸಿಕೊಂಡರು. ಇಂಗ್ಲಿಷ್ ಕಲಿತ ಮೇಲೆ ಜಾರ್ಜ್ ರೇನಾಲ್ಡ್‍ಸ್‍ರವರ 8 ಸಂಪುಟವಿರುವ ಲಂಡನ್ ಕೋರ್ಟ್‍ನ ಮಿಸ್ಟರಿಸಿ ಎನ್ನುವ ಓದಿದರು. ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದರಿಂದ ಕ್ವೀನ್ಸ್ ಕಾಲೇಜಿಗೆ ಸೇರಲಾಗಲಿಲ್ಲ, ಸೆಂಟ್ರಲ್ ಹಿಂದೂ ಕಾಲೇಜಿನಲ್ಲಿ ಅವರ ಗಣಿತದಲ್ಲಿ ವೀಕ್ ಇದ್ದದ್ದರಿಂದ ಸೀಟು ಸಿಗಲಿಲ್ಲ. 5 ರೂಪಾಯಿ ಸಂಬಳಕ್ಕೆ ವಕೀಲರ ಮಗನೊಬ್ಬನಿಗೆ ಟ್ಯೂಷನ್ ಹೇಳಿಕೊಡಲಾರಂಭಿಸಿಅರು. ಶೇಕಡ 60ರಷ್ಟು ಸಂಬಳವನ್ನು ಮನೆಗೆ ಕಳಿಸುತ್ತಿದ್ದರು. 
1895ರಲ್ಲಿ ಅಜ್ಜನ ಬಲವಂತದಿಂದಾಗಿ 15ನೇ ವಯಸ್ಸಿನಲ್ಲಿಯೇ ವಿವಾಹವಾಗಬೇಕಾಗಿ ಬಂದಿತು. ಆದರೆ ಹೆಂಡತಿ ಜಗಳಗಂಟಿಯಾಗಿದ್ದಳು. ಹೆಂಡತಿ ತವರು ಮನೆಗೆ ಹಿಂದಿರುಗಿದಳು. ಪ್ರೇಮ್‍ಚಂದ್, ಆಕೆಯನ್ನು ಕರೆದುಕೊಂಡು ಬರಲು ಪ್ರಯತ್ನಿಸಲಿಲ್ಲ. ಅವರು ಬೇರೆಯಾದ ನಂತರ, 1906ರಲ್ಲಿ ಅವರು ಶಿವರಾಣಿ ದೇವಿ ಎಂಬ ಬಾಲವಿಧವೆಯನ್ನು ವಿವಾಹವಾದರು. ಆ ಕಾಲಕ್ಕೆ ಅದು ಕ್ರಾಂತಿಕಾರಕವಾಗಿತ್ತು. ಬಹಳಷ್ಟು ವಿರೋಧವನ್ನು ಎದುರಿಸಬೇಕಾಯಿತು. ಕೇವಲ ಬರವಣಿಗೆಯಲ್ಲಿ ಮಾತ್ರ ವಿಧವಾ ವಿವಾಹವನ್ನು ಬೆಂಬಲಿಸದೆ, ತಾವೇ ಅದನ್ನು ಪಾಲಿಸಿದ ಅಪರೂಪದ ವ್ಯಕ್ತಿಯವರು.  ತಮ್ಮ ಮಡದಿಗೆ ಅಪಾರ ಗೌರವವನ್ನೂ ನೀಡುತ್ತಿದ್ದರು.
1905 ರಲ್ಲಿ ಕಾನ್‍ಪುರ್‍ಗೆ ತೆರಳಿ ಅಲ್ಲಿ ’ಜûಮಾ£” ಪತ್ರಿಕೆಯ ಸಂಪಾದಕರಾದ ದಯಾನಾರಾಯಣ್ ನಿಗಮ್ ಅವರನ್ನು ಭೇಟಿಯಾದರು. ನಂತರ ಬಹಳ ವರ್ಷಗಳು ಆ ಪತ್ರಿಕೆಗೆ ಲೇಖನಗಳನ್ನು, ಕಥೆಗಳನ್ನು ಬರೆದರು. 1905ರಲ್ಲಿ ರಾಷ್ಟ್ರೀಯತಾವಾದದಿಂದ ಪ್ರೇರಿತರಾದ ಅವರು ಗೋಪಾಲ್ ಕೃಷ್ಣ ಗೋಖಲೆಯವರ ವಿಧಾನಗಳನ್ನು ಟೀಕಿಸಿ ಬಾಲ ಗಂಗಾಧರ ತಿಲಕ್‍ರವರ ಉಗ್ರಗಾಮಿ ಕ್ರಮಗಳನ್ನು ಬೆಂಬಲಿಸಿ ಜûಮಾನಾದಲ್ಲಿ ಲೇಖನ ಬರೆದರು. ಅವರ ಮೊದಲ ಪ್ರಕಟಿತ ಕಥೆ “ದುನಿಯ ಕಾ ಸಬ್ ಸೆ ಅನ್ಮೋಲ್ ರತ್ನ್.” ಅವರ ಪ್ರಕಾರ ಸ್ವಾತಂತ್ರ್ಯ ಸಾಧಿಸಲು ಬೇಕಿರುವ ಕೊನೆಯ ರಕ್ತದ ಬಿಂದುವೇ ಅಮೂಲ್ಯ ರತ್ನ.
ದೇಶಪ್ರೇಮಿಯಾಗಿ ಅವರು ಉರ್ದುವಿನಲ್ಲಿ ಜನರನ್ನು ಬ್ರಿಟಿಷ್ ವಸಾಹತು ಆಳ್ವಿಕೆಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಪೆÇ್ರೀತ್ಸಾಹಿಸಿದರು. 1907ರಲ್ಲಿ ’ಸೋಜ್ ಎ ವತ£” ಎಂಬ ಹೆಸರಿನ ಕಥಾಸಂಕಲನವಾಗಿ ಬಿಡುಗಡೆಗೊಂಡಿತು. ಬ್ರಿಟಿಷ್ ಅಧಿಕಾರಿಗಳು ಇದನ್ನು ನಿಷೇಧಿಸಿದರು. ಇದರಿಂದಾಗಿ ಅವರು ನವಾಬ್‍ರಾಯ್‍ನಿಂದ ಪ್ರೇಮ್‍ಚಂದ್ ಎಂದು ಹೆಸರು ಬದಲಿಸಿಕೊಂಡರು. 
1910 ರಷ್ಟರಲ್ಲಿ ಅವರು ಉರ್ದುವಿನ ಪ್ರಮುಖ ಬರಹಗಾರರಾಗಿ ಹೊರಹೊಮ್ಮಿದ್ದರು 1914ರಿಂದ ಹಿಂದಿಯಲ್ಲಿ ಬರೆಯಲಾರಂಭಿಸಿದರು. 1916ರಲ್ಲಿ ಗೋರಖ್‍ಪುರ್‍ನ ನಾರ್ಮಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರಾದರು. 1919ರಲ್ಲಿ ಅವರ ಮೊದಲ ಹಿಂದಿ ಕಾದಂಬರಿ “ಸೇವಾ ಸದನ್” ಪ್ರಕಟವಾಯಿತು. ಅವರು ಕೇವಲ ಬರವಣಿಗೆಯಲ್ಲಿ ಮಾತ್ರ ದೇಶಪ್ರೇಮಿಯಾಗಿರಲಿಲ್ಲ, ತಮ್ಮ ಆಚರಣೆಯಲ್ಲಿಯೂ ಸಹ ದೇಶಪ್ರೇಮಿಯಾಗಿದ್ದರು. ಗಾಂಧೀಜಿಯವರು ಕರೆನೀಡಿದ ಅಸಹಕಾರ ಚಳುವಳಿಯ ಭಾಗವಾಗಿ ಸ್ಕೂಲ್ ಇನ್ಸಪೆಕ್ಟರ್ ಆಗಿದ್ದ ಅವರು, ಕುಟುಂಬದ ಹೊಣೆಗಾರಿಕೆಯಿದ್ದರೂ ಸಹ, ತಮ್ಮ ಸರ್ಕಾರಿ ನೌಕರಿಯನ್ನು ತೊರೆದರು.. ಲಕ್ನೋದ ಪ್ರಗತಿಪರ ಬರಹಗಾರರ ಸಂಘದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. 
ಕೆಲಸ ಬಿಟ್ಟ ನಂತರ ಅವರು ಬನಾರಸ್‍ಗೆ ಹಿಂತಿರುಗಿ ತಮ್ಮ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಮಗ್ನರಾದರು. 1923 ರಲ್ಲಿ ತಾವೇ ಸರಸ್ವತಿ ಪ್ರೆಸ್ ಎಂಬ ಒಂದು ಪ್ರಿಂಟಿಂಗ್ ಪ್ರೆಸ್ ಆರಂಭಿಸಿದರು. 1930 ರಲ್ಲಿ ಹಂಸ್ ಎಂಬ ಸಾಹಿತ್ಯಿಕ-ರಾಜಕೀಯ ವಾರಪತ್ರಿಕೆಯನ್ನು ಆರಂಭಿಸಿದರು. ಭಾರತೀಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಹುರಿದುಂಬಿಸುವ ಗುರಿಯನ್ನು ಹೊಂದಿತ್ತು. ಆದರೆ ಅದರಿಂದ ನಷ್ಟ ಅನುಭವಿಸಿದ ಪ್ರೇಮ್‍ಚಂದ್‍ರವರು ಕಾನ್ಪುರದ ಮಾರ್ವಾರಿ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇರಿದರು. ಆದರೆ ಕಾಲೇಜಿನ ಆಡಳಿತ ಮಂಡಳಿಯ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಆ ಕೆಲಸವನ್ನು ಬಿಟ್ಟರು. ಬನಾರಸ್‍ನಲ್ಲಿ ಮರ್ಯಾದ ಪತ್ರಿಕೆಯ ಸಂಪಾದಕರಾದರು. ಕಾಶಿ ವಿದ್ಯಾಪೀಠದಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. 
ತೀವ್ರ ಹಣಕಾಸಿನ ಬಿಕ್ಕಟ್ಟಿನಿಂದಾಗಿ, 1934ರಲ್ಲಿ ಮುಂಬೈಗೆ ತೆರಳಿ ಅಲ್ಲಿ ಅಜಂತಾ ಸಿನಿಟೋನ್ ಪೆÇ್ರಡಕ್ಷನ್ ಹೌಸ್ ನಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಸೇರಿಕೊಂಡರು.  ಮಜû್ದೂರ್ (ಕಾರ್ಮಿಕ) ಚಿತ್ರಕ್ಕೆ ಸ್ಕ್ರಿಪ್ಟ್ ಬರೆದರು. ಕಾರ್ಮಿಕ ವರ್ಗದ ಹೀನಾಯ ಪರಿಸ್ಥಿತಿಯನ್ನು ಚಿತ್ರಿಸಿದ ಆ ಚಿತ್ರ ಕಾರ್ಮಿಕ ವರ್ಗವನ್ನು ಹೋರಾಡುವಂತೆ ಹುರಿದುಂಬಿಸಿತು. ಚಿತ್ರವನ್ನು ನಿಷೇಧಿಸಲಾಯಿತು. ಮುಂಬೈನ ಚಿತ್ರರಂಗದ ವ್ಯಾಪಾರಿ ಧೋರಣೆ ಹಿಡಿಸದೆ ಪುನಃ ಬನಾರಸ್‍ಗೆ ಹಿಂತಿರುಗಿದರು. ಕ¥sóÀನ್ ಮತ್ತು ಗೋದಾನ್ ಬರೆದು ಮುಗಿಸಿದರು 1936.
ಮುನ್ಷಿ ಪ್ರೇಮ್‍ಚಂದ್‍ರವರು 20ನೇ ಶತಮಾನದ ಆದಿಭಾಗದ ಭಾರತದ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರು. ಕಾದಂಬರಿಕಾರರು, ಕತೆಗಾರರು, ನಾಟಕಕಾರರು, ಅನುವಾದಕರೂ ಆಗಿದ್ದ ಅವರು ಹಲವಾರು ಕಾದಂಬರಿಗಳು, ನೂರಾರು ಸಣ್ಣ ಕಥೆಗಳು ಮತ್ತು ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ಇತರೆ ಭಾಷೆಗಳಿಂದ ಬಹಳಷ್ಟು ಸಾಹಿತ್ಯ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಮೊದಲಿಗೆ ಉರ್ದುವಿನಲ್ಲಿ ತಮ್ಮ ಬರವಣಿಗೆಯನ್ನು ಆರಂಭಿಸಿದರು. ಕ್ರಮೇಣವಾಗಿ ಹಿಂದಿಯಲ್ಲಿ ಬರೆಯಲಾರಂಭಿಸಿದ ಅವರು ತಮ್ಮ ಶೈಲಿಯೊಂದಿಗೆ ಮತ್ತು ಮಹತ್ವಪೂರ್ಣ ಸಾಮಾಜಿಕ ಸಂದೇಶಗಳನ್ನು ನೀಡುವುದರೊಂದಿಗೆ ಓದುಗರ ಮನ ಗೆದ್ದರು. ಅವರ ಬರವಣಿಗೆಯ ಮುಖ್ಯ ಲಕ್ಷಣಗಳೆಂದರೆ ಸರಳ ಭಾಷೆಯ ಬಳಕೆ ಮತ್ತು ಆಸಕ್ತಿದಾಯಕವಾಗಿ ಕಥೆ ಹೇಳುವಿಕೆ. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮಸ್ಯೆಯನ್ನು ಬಿಂಬಿಸಿತು. ಸಂಸ್ಕೃತದ ಪ್ರಭಾವವಿದ್ದ ಹಿಂದಿಯನ್ನು ಬಳಸದೆ, ಜನರಾಡುತ್ತಿದ್ದ ಭಾಷೆಯನ್ನು ಸಾಹಿತ್ಯಕ್ಕೆ ತಂದರು.
ಸ್ವಾತಂತ್ರ್ಯಪ್ರೇಮಿ, ದೇಶಪ್ರೇಮಿಯಾಗಿದ್ದ ಅವರು ತಮ್ಮ ಆರಂಭಿಕ ಬರಹಗಳಲ್ಲಿ ಭಾರತದ ಉದ್ದಕ್ಕೂ ಬೆಳೆಯುತ್ತಿದ್ದ ರಾಷ್ಟ್ರೀಯ ಚಳುವಳಿಗಳನ್ನು ಚಿತ್ರಿಸಿದ್ದಾರೆ. ವಿಚಾರವಾದಿ ಧೋರಣೆಯನ್ನು ಹೊಂದಿದ್ದಾರೆ. ಅವರ ಪ್ರಕಾರ ಧಾರ್ಮಿಕ ಮೌಲ್ಯಗಳು ಬಲಿಷ್ಟ ಅವಕಾಶವಾದಿಗಳು ಬಲಹೀನರನ್ನು ಶೋಷಿಸಲು ಉಪಯೋಗಿಸುವ ಒಂದು ಅಸ್ತ್ರ. ಬಾಲ್ಯ ವೈಧವ್ಯ, ವೇಶ್ಯಾ ಪದ್ಧತಿ, ಊಳಿಗಮಾನ್ಯ ವ್ಯವಸ್ಥೆ, ಬಡತನ, ವಸಾಹತುವಾದ, ಸ್ವಾತಂತ್ರ್ಯ ಸಂಗ್ರಾಮ, ಭ್ರಷ್ಟಾಚಾರ ಮುಂತಾದ ವಿಷಯಗಳನ್ನು ಪ್ರತಿಪಾದಿಸಲು ಇಟ್ತಿದ್ದಾರೆ. ಸಮಾಜದ ವಿವಿಧ ಜನರ ಸಮಸ್ಯೆಗಳನ್ನು ಪ್ರತಿಬಿಂಬಿಸಿದ್ದಾರೆ. ಹಿಂದು – ಮುಸ್ಲಿಂ ಐಕ್ಯತೆಗೆ ಒತ್ತ್ತು ನೀಡಿದ್ದರೆ. ತಮ್ಮ ಮೊದಲ ಕಿರುಕಾದಂಬರಿ “ಅಸ್ರಾರ್ ಎ ಮಾಬಿದ್” ನಲ್ಲಿ ದೇವಸ್ಥಾನದ ಪೂಜಾರಿಗಳ ಭ್ರಷ್ಟತೆ ಮತ್ತು ಬಡ ಹೆಂಗಸರ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ಬಹಿರಂಗಗೊಳಿಸಿದರು. ಬ್ರಿಟಿಷ್ ಸರ್ಕಾರದೊಂದಿಗೆ ಸಹಕರಿಸುವ ಭಾರತೀಯರ ವಿಡಂಬನೆ ಮಾಡುತ್ತ ಕಥೆಗಳನ್ನು ಬರೆದಿದ್ದಾರೆ. 
ಆಧು£ಕ ಬಾರತದ ಸಾಹಿತ್ಯಕ್ಷೇತ್ರದಲ್ಲಿಯೇ ಅವರ ಗೋದಾನ್ ಅನ್ನು ಉತ್ಕೃಷ್ಟ ಕಾದಂಬರಿಯಾಗಿ ಪರಿಗಣಿಸಲಾಗಿದೆ. ಭಾರತದಲ್ಲಿನ ಜಾತಿ ವ್ಯವಸ್ಥೆ, ಕೆಳ ವರ್ಗಗಳ ಶೋಷಣೆ, ಮಹಿಳೆಯರ ಶೋಷಣೆ, ಕೈಗಾರಿಕೀಕರಣದ ಸಮಸ್ಯೆಗಳನ್ನು ಮನೋಜ್ಞವಾಗಿ ಚಿತ್ರಿಸಿದೆ. 1963 ರಲ್ಲಿ ಇದು ಹಿಂದಿ ಚಿತ್ರವಾಯಿತು. 
ಇತರ ಕಥಾವಸ್ತುಗಳೊಂದಿಗೆ, ಭಾರತದಲ್ಲಿ ಮಹಿಳೆಯರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದುದ್ದನ್ನು ಕಂಡು ಮನನೊಂದ ಅವರು ತಮ್ಮ ಹಲವಾರು ಕಥೆ, ಕಾದಂಬರಿಗಳಲ್ಲಿ ಹೆಣ್ಣುಮಕ್ಕಳ ಸಮಸ್ಯೆಗಳ ಬಗ್ಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ, ತನ್ಮೂಲಕ ಓದುಗರ ಮನಸ್ಸಿನಲ್ಲಿ ಅರಿವನ್ನು ಮೂಡಿಸಲೆತ್ನಿಸಿದ್ದಾರೆ. ನಿರ್ಮಲ ಮತ್ತು ಪ್ರತಿಜ್ಞ ಕಾದಂಬರಿಗಳು ಸ್ತ್ರೀಕೇಂದ್ರಿತವಾಗಿವೆ. ವರದಕ್ಷಿಣೆ ಮತ್ತು ವಿಧವಾ ವಿವಾಹದ ಬಗ್ಗೆ ಚರ್ಚಿಸಿವೆ. ಅವರ ಎರಡನೆ ಕಿರುಕಾದಂಬರಿ “ಪ್ರೇಮ’ ವಿಧವಾ ವಿವಾಹದ ಬಗ್ಗೆ ಚರ್ಚಿಸುತ್ತದೆ. ಅದರಲ್ಲಿ ಅಮೃತ್ ರಾಯ್ ಸಂಪ್ರದಾಯವಾದಿ ಸಮಾಜವನ್ನು ಧಿಕ್ಕರಿಸಿ ಪೂರ್ಣಳನ್ನು ವಿವಾಹವಾಗುತ್ತಾನೆ. 
ಭಾರತ ಸಾಹಿತ್ಯ ಅಕಾಡೆಮಿ 2005 ರಲ್ಲಿ ಅವರ ಗೌರವಾರ್ಥವಾಗಿ ಪ್ರೇಮ್ ಚಂದ್ ¥sóÉಲೋಶಿಪ್ ಸ್ಥಾಪಿಸಿತು. ಇದನ್ನು ಸಾರ್ಕ್ ದೇಶಗಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಸಾಧಿಸಿದವರಿಗೆ ನೀಡಲಾಗುತ್ತದೆ.
ಅವರ ಕಥಾಸಂಕಲವನ್ನು “ಮಾನಸ ಸರೋವರ” ಎಂಬ ಹೆಸರಿನಡಿಯಲ್ಲಿ ಮುದ್ರಿಸಲಾಗಿದೆ. ಅವರು ಸಮಾಜ ಸುಧಾರಕರಾಗಿದ್ದರು. ಮಾತಿನಲ್ಲಲ್ಲದೆ ಕೃತಿಯಲ್ಲಿಯೂ ಮಾಡಿ ತೋರಿಸಿದ್ದಾರೆ. ಅವರ ಕೃತಿಗಳು  - ಸೇವಾಸದನ್, ರಂಗ್ ಮಂಚ್, ಗಬನ್, ನಿರ್ಮಲ, ಗೋದಾನ್ - ಭಾರತದ ಎಲ್ಲಾ ಭಾಷೆಗಳಿಗೆ ಅನುವಾದಗೊಂಡಿದೆ. ಜೊತೆಗೆ ಇಂಗ್ಲಿಷ್, ರಷ್ಯನ್, ಚೀನಿ ಮತ್ತಿತರ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.
ಅವರನ್ನು ಉರ್ದು ಸಣ್ಣ ಕತೆಗಳ ಪಿತಾಮಹ ಎಂದು ಕರೆಯಲಾಗಿದೆ. ಅ¥sóÁ್ಸನಾ ಬರೆದ ಅವರು ಅದರಲ್ಲಿ ಹಾಸ್ಯವನ್ನು ವಿಡಂಬನೆಯನ್ನು ಬಳಸಿದ್ದಾರೆ. ಗಾಂಧೀಜಿಯವರ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಕೆಲಸಗಳಿಗೆ ಬೆಂಬಲ ನೀಡಲು ಸಾಹಿತ್ಯ ಕ್ಷೇತ್ರವನ್ನು ಆರಿಸಿಕೊಂಡು ಆ ಕ್ರಾಂತಿಕಾರಿ ವಿಚಾರಗಳನ್ನು ಅಳವಶಿಸಿಕೊಂಡರು. ಚಿಂತಕರಾದ ಅವರು ತಮ್ಮ ಬರವಣಿಗೆಯನ್ನು ಕೇವಲ ಮನರಂಜನೆಗೆ ಎಂದು ಭಾವಿಸದೆ ಸಾಮಾಜಿಕ ಉದ್ದೇಶವನ್ನು ಹೊಂದಿದ್ದು ಸಾಮಜಿಕ ಟೀಕೆಯನ್ನು ಒಳಗೊಂಡಿದೆ. ಅವರ ಪ್ರಕಾರ ಸಾಹಿತ್ಯ ಜನರನ್ನು ಅರಿವು ಮೂಡಿಸುವಲ್ಲಿ ಶಕ್ತಿಯುತ ಸಾಧನ. ಸಾಮಾಜಿಕ ಬೆಳವಣಿಗೆಯಲ್ಲಿ ನಂಬಿಕೆಯಿಟ್ಟ ಅವರು ಎಲ್ಲರಿಗೂ ಸಮಾನ ಅವಕಾಶ ಕೊಡಬೇಕೆಂದು ಪ್ರತಿಪಾದಿಸಿದರು. ಕಲೆ ಕಲೆಗಾಗಿ ಅಲ್ಲ, ಸಮಾಜ ಪ್ರಗತಿಗಾಗಿ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಆದ್ದರಿಂದಲೇ ಅವರ ಕತೆ-ಕಾದಂಬರಿಗಳು ಸಹ ಇಂದಿಗೂ ಜನಮನದಲ್ಲುಳಿದಿವೆ. 

ವಿಶ್ವದೆಲ್ಲೆಡೆಯ ಕಥೆಗಳು

ಯಾರು ಹೆಚ್ಚು?
ಒಮ್ಮೆ ಗಾಳಿ ಸೂರ್ಯನೊಂದಿಗೆ ತಾನೇ ದೊಡ್ಡವನೆಂದು ವಾದ ಮಾಡತೊಡಗಿತು. ಸೂರ್ಯ ಹೇಳಿತು, ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ದೊಡ್ಡವರೇ ಎಂದಿತು. ಆದರೆ ಗಾಳಿ ಕೇಳಿಸಿಕೊಳ್ಳಲು ಸಿದ್ಧವಿರಲಿಲ್ಲ. ಪಂದ್ಯಕ್ಕೆ ಆಹ್ವಾನಿಸಿತು. ಸರಿ ಎಂದಿತು ಸೂರ್ಯ. ದಾರಿಯಲ್ಲಿ ಓರ್ವ ವ್ಯಕ್ತಿ  ಶಾಲ್ ಹೊದ್ದುಕೊಂಡು ನಡೆಯುತ್ತಿದ್ದ. ಅ ವ್ಯಕ್ತಿಯಿಂದ ಯಾರು ಶಾಲ್ ಅನ್ನು ಬೇರ್ಪಡಿಸುವರೋ ಅವರೇ ಬಲಶಾಲಿ ಎಂದು ನಿರ್ಧಾರಿತವಾಯಿತು. ಗಾಳಿ ತನ್ನೆಲ್ಲ ಶಕ್ತಿ ಮೀರಿ ಬೀಸಿತು. ಆದರೆ ಆ ವ್ಯಕ್ತಿ ಶಾಲ್ ಅನ್ನು ಇನ್ನಷ್ಟು ಭದ್ರವಾಗಿ ಸುತ್ತಿಕೊಂಡನಷ್ಟೇ.. ನಂತರ ಸೂರ್ಯನ ಸರದಿ. ಸೂರ್ಯ ತನ್ನ ತಾಪವನ್ನು ಸ್ವಲ್ಪ ಹೆಚ್ಚಿಸಿತು. ಸ್ವಲ್ಪ ಹೊತ್ತಾದ ಮೇಲೆ ಆ ವ್ಯಕ್ತಿ ಶಾಲ್ ತೆಗೆದುಬಿಟ್ಟ. ಗಾಳಿ ತಾನು ಸೋತೆನೆಂದು ಒಪ್ಪಿಕೊಂಡಿತು.
ಬಿತ್ತಿದಂತೆಯೇ ಬೆಳೆಯುತ್ತೇವೆ.
ಮೂವರು ಕಳ್ಳರು ಸಂಪತ್ತನ್ನು ಕದ್ದರು. ಹಸಿವಾಯಿತೆಂದು ಒಬ್ಬ ಊಟ ತರಲು ಹೋದ. ಉಳಿದ ಇಬ್ಬರು ಕಳ್ಳರು ಹಿಂತಿರುಗಿದಾಗ ಅವನನ್ನು ಹೊಡೆದು ಕೊಂದರು. ಆ ಊಟ ತರಲು ಹೋಗಿದ್ದ ಕಳ್ಳ ಇವರಿಬ್ಬರನ್ನು ಸಾಯಿಸಿ ಗಂಟು ಹೊಡೆಯಲು, ಊಟದಲ್ಲಿ ವಿಷ ಬೆರೆಸಿದ್ದ. ಅದನ್ನು ತಿಂದ ಅವರು ಸತ್ತರು. ಕೆಟ್ಟದ್ದನ್ನು ಮಾಡಿ ಒಳ್ಲೆಯದ್ದನ್ನು ಪಡೆಯಲು ಸಾಧ್ಯವಿಲ್ಲ.
ಕಾಲ ಅಮೂಲ್ಯ
ಹುಡುಗನೊಬ್ಬನಿಗೆ ಕಾಲದ ಅರಿವೇ ಇರಲಿಲ್ಲ, ಎಷ್ಟು ಹೇಳಿದರೂ ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಲಿಲ್ಲ. ಒಂದು ದಿನ ಅವನಿಗೆ ಹಾಡುವುದರಲ್ಲಿ ಮೊದಲ ಬಹುಮಾನ ಬಂದಿದೆ ಎಂದು ಗೊತ್ತಾಯಿತು. ಆದರೆ ಸೋಮಾರಿತನದಿಂದ ಅವನು ೨ ದಿನ ಬಿಟ್ಟು ಹೋದ. ಆದರೆ ಅವನಿಗೆ ಆ ಬಹುಮಾನದಿಂದ ಏನು ಉಪಯೋಗವಾಗಲಿಲ್ಲ, ಏಕೆಂದರೆ ಅದು ಹಿಂದಿನ ದಿನದ ಸರ್ಕಸ್ ಶೋನ ಟಿಕೆಟ್ ಆಗಿತ್ತು!!
ಮೋಸಕ್ಕೆ ತಕ್ಕ ಶಾಸ್ತಿ
ತೋಳವೊಂದಕ್ಕೆ, ಒಂದು ದಿನ ಕುರಿಚರ್ಮ ಸಿಕ್ಕಿತು. ತೋಳ ಅದನ್ನು ಹೊದ್ದುಕೊಂಡು ಕುರಿಯ ಹಿಂಡಿನಲ್ಲಿ ಸೇರಿಕೊಂಡು ಕುರಿಗಳನ್ನು ತಿನ್ನಲು ಹೊಂಚು ಹಾಕಿತು. ಅಂದೇ ಕುರಿ ಮಂದೆಯ ಯಜಮಾನನ ಮನೆಯಲ್ಲಿ ಕಾರ್ಯಕ್ರಮ ಇದ್ದುದ್ದರಿಂದ, ಎಲ್ಲಕ್ಕಿಂತ ದಷ್ಟಪುಷ್ಟವಾದ ಕುರಿಯನ್ನು ಕತ್ತರಿಸಲು ತೀರ್ಮಾನಿಸಲಾಯಿತು. ಆಳು ಬಂದು ಕುರಿಯ ಹೊದಿಕೆಯಲ್ಲಿದ್ದ ತೋಳವನ್ನು ತೆಗೆದುಕೊಂಡು ಕತ್ತರಿಸಿದ. ಎಲ್ಲರೂ ಆ ಮಾಂಸದಿಂದ ತಯಾರಿಸಿದ ಊಟವನ್ನು ಸಂತೋಷವಾಗಿ ತಿಂದರು.

ಅಮ್ಮನ ದಿನ
ವ್ಯಕ್ತಿಯೊಬ್ಬ ಮಾತೆಯರ ದಿನದಂದು ತಾಯಿಗೆ ಶುಭಾಶಯ ಕಳಿಸಲು ಹೂವಿನಂಗಡಿ ಒಂದಕ್ಕೆ ಹೋಗಿ ಅಲ್ಲಿಂದ ತಾಯಿಯ ವಿಳಾಸ ಕೊಟ್ಟು ಅಲ್ಲಿಗೆ ಹೂ ಕಳಿಸಲು ಹೇಳಿದ. ಅವನು ಅಲ್ಲಿಯೇ ಹೊರಗಡೆ ಮೆಟ್ಟಿಲಿನ ಮೇಲೆ ಕುಳಿತು ಅಳುತ್ತಿದ್ದ ಹುಡುಗಿಯನ್ನು ನೋಡಿದ. ಕಾರಣವನ್ನು ಕೇಳಿದ. ಅವಳು, “ನನ್ನ ತಾಯಿಗೆ ಹೂ ಕೊಡಬೇಕು ಆದರೆ ನನ್ನ ಬಳಿ ೭೫ ಸೆಂಟ್ಸ್ ಮಾತ್ರ ಇದೆ, ಆದರೆ ಆ ಹೂ ೨ ಡಾಲರ್ ಆಗುತ್ತದೆ” ಎಂದಳು. ಅವನು “ಅವಳಿಗೆ ಹೂ ಕೊಂಡುಕೊಟ್ಟು, ನಡಿ ನಿನ್ನನ್ನು ಬಿಟ್ಟು ಬರುತ್ತೇನೆ” ಎಂದ. ಅವಳವನನ್ನು ಅಲ್ಲಿಯೇ ಇದ್ದ ಸ್ಮಶಾನಕ್ಕೆ ಕರೆದೊಯ್ದು, ತಾಯ ಸಮಾಧಿಯ ಮೇಲೆ ಹೂ ಇಟ್ಟಳು. ಇದನ್ನು ಕಂಡ ಆ ವ್ಯಕ್ತಿಯ ಕಣ್ಣು ತೇವವಾಯಿತು. ಅಲ್ಲಿಂದ ಆತ ಆ ಹೂ ಅಂಗಡಿಗೆ ತೆರಳಿದ – ತಾನಿತ್ತ ಹೂವಿನ ಆರ್ಡರ್ ಬೇಡವೆಂದು ಹೇಳಿ,  ಹೂವಿನೊಂದಿಗೆ ೨೦೦ ಮೈಲಿ ದೂರದಲ್ಲಿದ್ದ ತಾಯ ಮನೆಗೆ ಹೊರಟ!

ಕಲ್ಲು ಮತ್ತು ಮರಳು
ಇಬ್ಬರು ಸ್ನೇಹಿತರಿದ್ದರು. ರಮೇಶ, ಸುರೇಶ ಎಂದುಕೊಳ್ಳೋಣ. ಒಮ್ಮೆ ರಮೇಶನಿಗೆ ಕೋಪ ಬಂದು ಸುರೇಶನನ್ನು ಹೊಡೆದುಬಿಟ್ಟ. ಸುರೇಶ ಮರಳಿನ ಮೇಲೆ “ಇಂದು ನನ್ನ ಸ್ನೇಹಿತನಿಗೆ ಕೋಪ ಬಂತು, ಅದಕ್ಕೆ ನನ್ನನ್ನು ಹೊಡೆದ” ಎಂದು ಬರೆದ. ಅಲ್ಲಿಯೇ ಈಜಾಡುವಾಗ ಸುರೇಶ ನೀರಿನಲ್ಲಿ ಮುಳುಗಿಬಿಟ್ಟ. ರಮೇಶ ತಕ್ಷಣವೇ ನೀರಿಗೆ ಬಿದ್ದು, ಸುರೇಶನ ಜೀವವನ್ನು ಕಾಪಾಡಿದ. ಆಗ ಸುರೇಶ ಅದನ್ನು ಕಲ್ಲಿನ ಮೇಲೆ ಬರೆದ, “ಇಂದು ನನ್ನ ಗೆಳೆಯ ನನ್ನ ಜೀವವನ್ನು ಉಳಿಸಿದ”. ರಮೇಶ “ಒಂದನ್ನು ಕಲ್ಲಿನ ಮೇಲೆ ಬರೆದೆ, ಇನ್ನೊಂದನ್ನು ಮರಳಿನ ,ಮೇಲೆ ಬರೆದೆ, ಯಾಕೆ?” ಕೇಳಿದ. ಅದಕ್ಕೆ ಸುರೇಶ ಉತ್ತರ ಕೊಟ್ಟಿದ್ದು “ನಮ್ಮನ್ನು ಯಾರಾದರೂ ನೋಯಿಸಿದರೆ ಅದನ್ನು ಮರಳಿನ ಮೇಲೆ ಬರೆದರೆ, ಕ್ಷಮೆ ಎಂಬ ಗಾಳಿಯ ಮೂಲಕ ಅದು ಅಳಿಸಿಹೋಗುತ್ತದೆ. ಆದರೆ ನಮಗೆ ಯಾರಾದರೂ ಒಳ್ಳೆಯದನ್ನು ಮಾಡಿದಾಗ ಅದನ್ನು ಯಾವ ಗಾಳಿಯೂ ಅಳಿಸದಂತೆ ಕಲ್ಲಿನ ಮೇಲೆ ಬರೆಯಬೇಕು” ಎಂದ.
ಎರಡು ಕಪ್ಪೆಗಳು.
ಒಮ್ಮೆ ಎರಡು ಕಪ್ಪೆಗಳು ಮೊಸರಿನ ಗಡಿಗೆಗೆ ಬಿದ್ದುಹೋದವು. ಎರಡೂ ಕಪ್ಪೆಗಳಿಗೆ ತಾವು ಅದರಲ್ಲಿ ಮುಳುಗಿ ಸಾಯುತ್ತೇವೆ ಎಂದು ಭಯವಾಯಿತು. ಒಂದು ಕಪ್ಪೆ ಆ  ಭಯದಲ್ಲಿಯೇ, ಏನೂ ಪ್ರಯತ್ನಿಸದೆ ಮೊಸರಿನಲ್ಲಿ ಮುಳುಗಿ ಸತ್ತುಹೋಯಿತು. ಆದರೆ, ಇನ್ನೊಂದು ಕಪ್ಪೆ ಮಾತ್ರ ಧೈರ್ಯಗೆಡದೆ ಈಜಲಾರಂಭಿಸಿತು. ಅದು ಸತತವಾಗಿ ಕಾಲುಗಳನ್ನು ಆಡಿಸುತ್ತಿದ್ದರಿಂದ, ಮೊಸರು ಹೆಪ್ಪುಗಟ್ಟಿ ಬೆಣ್ಣೆ ಬಂದಿತು. ತಕ್ಷಣವೇ ಕಪ್ಪೆ ಆ ಬೆಣ್ಣೆಯ ಮೇಲೆ ಜಿಗಿದು, ಗಡಿಗೆಯಿಂದ ಆಚೆ ಬಂದಿತು, ತನ್ನ ಜೀವವನ್ನು ಉಳಿಸಿಕೊಂಡಿತು.

ಮಹಾನ್ ಮಾತೆಯರು

[ಕನ್ನಡದ ಕವಿಯೊಬ್ಬರು ಹೇಳಿರುವಂತೆ “ಮನೆಯೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು.” ಪ್ರತಿಯೊಬ್ಬ ವ್ಯಕ್ತಿ ತಾಯಿಂದ ಜನ್ಮವನ್ನು ಮಾತ್ರ ಪಡೆಯುವುದಲ್ಲದೆ, ಬದುಕಿನ ಬಹಳಷ್ಟನ್ನು ಪಡೆಯುತ್ತಾರೆ. ತಮ್ಮ ಮಕ್ಕಳನ್ನು ಲೋಕವೇ ತಿರಸ್ಕರಿಸಿದಾಗಲೂ, ಅವರೊಂದಿಗೆ ನಿಂತು, ಅವರನ್ನು ಮುನ್ನಡೆಸಿದ ತಾಯಂದಿರ ಬಗ್ಗೆ ಈ ಅಂಕಣ] 
ವಿಲ್ಮಾ ರುಡಾಲ್ಫ್ ಅಮೇರಿಕಾದ ಓಟಗಾರ್ತಿ. ೧೯೬೦ರಲ್ಲಿ ಅವರು “ವಿಶ್ವದ ಅತ್ಯಂತ ವೇಗವಾದ ಮಹಿಳೆ” ಎಂದು ಬಿರುದು ಪಡೆದರು. ಕಪ್ಪು ಸಮುದಾಯಕ್ಕೆ ಸೇರಿದ ಅವರು ನಾಗರಿಕ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. 
೧೯೪೦ ರ ಜೂನ್ ೨೩ ರಂದು ಅಮೇರಿಕಾದ ಟೆನಿಸ್ಸೆ ರಾಜ್ಯದ ಬೆತ್ಲೆಹೇಮ್ ನಲ್ಲಿ ಜನಿಸಿದ ವಿಲ್ಮಾ ಹುಟ್ಟಿದಾಗ ಬಹಳ ಬಲಹೀನವಾಗಿದ್ದರು. ಅವರಿಗೆ ಹಲವಾರು ಖಾಯಿಲೆಗಳಿತ್ತು, ಪೋಲಿಯೊ, ಸ್ಕಾರ್ಲೆಟ್ ಜ್ವರ ಮತ್ತು ನ್ಯುಮೋನಿಯಾ. ಇದರಿಂದಾಗಿ ಅವರ ಕಾಲು ಸೊಟ್ಟವಾಗಿ ಅರೆಅಂಗವಿಕಲರಾದರು. ಅವರ ಕಾಲುಗಳಿಗೆ ನಡೆಯಲು ಲೋಹದ ಪಟ್ಟಿಗಳನ್ನು ಹಾಕಲಾಯಿತು. ಮನೆಯವರೆಲ್ಲ ಔಷಧಿ ಹಚ್ಚಿ, ಕಾಲನ್ನು ನೀವುತ್ತಿದ್ದರು, ಫಿಸಿಯೋಥೆರಪಿ ಕೊಡಲಾಯಿತು. ಆದರೆ ಡಾಕ್ಟರ್, “ಅವಳು ಮತ್ತೆಂದೂ ನಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು. ಆದರೆ ಆಕೆಯ ತಾಯಿ, ವೈದ್ಯರೊಂದಿಗೆ ಸೆಡ್ಡು ಹೊಡೆದುಬಂದರು. “ಇಲ್ಲ ನನ್ನ ಮಗಳು ಖಂಡಿತವಾಗಿ ನಡೇಯುತ್ತಾಳೆ.” ತಾಯಿ ವಿಲ್ಮಾಳೊಂದಿಗೆ ಸಹ ಅದನ್ನೇ ಹೇಳಿದರು. “ನೀನು ನಡೆಯಬಲ್ಲೆ. ಅದನ್ನು ನೀನು ಗಾಢವಾಗಿ ನಂಬಬೇಕು.” ವಿಲ್ಮಾ ಹೇಳುತ್ತಾರೆ. “ನಾನು ನನ್ನ ತಾಯಿಯ ಮಾತನ್ನು ಬಲವಾಗಿ ನಂಬಿದೆ. ೯ನೇ ವರ್ಷದವಳಿದ್ದಾಗ ನನ್ನ ಕಾಲಿನ ಪಟ್ಟಿಯನ್ನು ತೆಗೆದುಹಾಕಿದೆ. ೨ ವರ್ಷಗಳ ನಂತರ ನಾನು ಬಾಸ್ಕೆಟ್ ಬಾಲ್ ಆಡಲಾರಂಭಿಸಿದ್ದೆ.” ಉತ್ತಮ ಓಟಗಾರ್ತಿಯಾಗಿದ್ದ ಅವರಿಗೆ ಕೋಚ್ ತರಬೇತಿ ನೀಡಿದರು. ೧೬ನೇ ವಯಸ್ಸಿನಲ್ಲಿ ಅಮೇರಿಕಾದ ಒಲಿಂಪಿಕ್ ತಂಡದಲ್ಲಿ ಸ್ಥಾನಗಳಿಸಿದ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಒಲಿಂಪಿಕ್ ರಿಲೇ ಓಟದಲ್ಲಿ ಕಂಚಿನ ಪದಕ ಪಡೆದರು. ತಮ್ಮ ಸತತ ಪ್ರಯತ್ನಗಳೊಂದಿಗೆ ೧೯೬೦ರಲ್ಲಿ ಒಲಿಂಪಿಕ್ಸ್ ನಲ್ಲಿ ೧೦೦ ಮೀಟರ್, ೨೦೦ ಮೀಟರ್ ಹಾಗೂ ೪*೧೦೦ ಮೀಟರ್ ರಿಲೆಯಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ಮೊದಲ ಅಮೇರಿಕನ್ ಮಹಿಳೆಯಾದರು. 

ಕಥಾ ದೀವಿಗೆ - “ಮಾತೆಯ ಮಮತೆ”

ಬಸ್‍ನಲ್ಲಿ ಕಿಟಕಿಯ ಪಕ್ಕ ಸೀಟು ಸಿಕ್ಕಾಗ ಬಹಳ ಸಂತೋಷವಾಗಿತ್ತು ಪ್ರಿಯಾಳಿಗೆ.  ಬಸ್ ಇನ್ನೇನು ಹೊರಡುವುದರಲ್ಲಿದ್ದಾಗ ಸುಮಾರು 17 -18 ರ ಹುಡುಗನೊಬ್ಬ ಅವಳ ಪಕ್ಕ ಬಂದು ಕುಳಿತುಕೊಂಡ. ನೋಡಲು ಬಹಳ ವಿಚಿತ್ರವಾಗಿದ್ದ. ಉದ್ದುದ್ದ ಕೂದಲು, ಒಂದು ಕಿವಿಗೆ ಓಲೆ, ಕೈಯಲ್ಲೊಂದು ದಪ್ಪದ ಕಬ್ಬಿಣದ ಕಡಗ, ಕಿವಿಗೆ ಇಯರ್¥sóÉÇೀನ್. ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದ ಅವಳಿಗೆ ಇದೆಲ್ಲಾ ಏನೂ ಹೊಸದಾಗಿರಲಿಲ್ಲ. 
ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ಅವಳಿಗೆ ಅರ್ಥವಾಗಿದ್ದು ಆ ಹುಡುಗ ಕೂಡ ದಾವಣಗೆರೆಗೆ ಎಂದು. ಅವಳಿಗೆ ಸಮಸ್ಯೆಯೊಂದು ಪರಿಹಾರವಾದಂತೆನಿಸಿತು. ಪರ್ಸ್‍ನಿಂದ ತನ್ನಕ್ಕನ ಮನೆಯ ವಿಳಾಸವಿದ್ದ ಚೀಟಿಯನ್ನು ತೋರಿಸಿ “ಈ ವಿಳಾಸ ಎಲ್ಲಿ ಬರುತ್ತೆ?” ಎಂದು ಕೇಳಿದಳು. ಅದನ್ನು ನೋಡಿ ಆ ಹುಡುಗ ಮುಖ ಸಿಂಡರಿಸಿಕೊಂಡು, “ನಂಗೊತ್ತಿಲ್ಲ” ಎಂದ. ‘ಗೊತ್ತಿಲ್ಲ ಎಂದರಾಗುತ್ತಿತ್ತು, ಮುಖವೇಕೆ ಸಿಂಡರಿಸಿಕೊಳ್ಳಬೇಕು’ ಎಂದುಕೊಂಡು “ಹೋಗಲಿ ಬಿಡಪ್ಪಾ” ಎಂದಳು. 
ಅಕ್ಕನ ಮನೆಗೆ ¥sóÉÇೀನ್ ಮಾಡಿದಾಗ ಅಕ್ಕನ ಮಗ ಸಂಜಯ್ ಮನೆಗೆ ಬಂದಿದ್ದಾನೆಂದು, ಅವನೇ ಬಂದು ಕರೆದುಕೊಂಡು ಹೋಗುತ್ತಾನೆ ಎಂದಾಗ ಪ್ರಿಯಾ ನಿರಾತಂಕವಾಗಿ ‘ಅಂಕಲ್ ಟಾಮ್ಸ್ ಕ್ಯಾಬಿನ್’ ಪುಸ್ತಕ ಓದಲು ಶುರುಮಾಡಿದಳು. 
ಒಂದು-ಒಂದೂವರೆ ಘಂಟೆಯಾದ ಮೇಲೆ ಇದ್ದಕ್ಕಿದ್ದಂತೆ ಎಚ್ಚರವಾಯಿತು ಪ್ರಿಯಾಳಿಗೆ. ಓದುತ್ತಾ ಓದುತ್ತಾ ಹಾಗೆಯೇ ನಿದ್ದೆ ಹೋಗಿದ್ದಳವಳು. ಏನದು ಸದ್ದು 
ಎಂದು ನೋಡಿದಾಗ ಆ ಹುಡುಗ ಇಯರ್ ¥sóÉÇೀನ್ ತೆಗೆದು ಲೌಡ್ ಸ್ಪೀಕರ್ ಆನ್ 
ಮಾಡಿದ್ದ. ಸ್ವಲ್ಪ ಕಸಿವಿಸಿ ಆದರೂ ತೋರಿಸಿಕೊಳ್ಳದೆ, “ನೋಡಪ್ಪಾ, ನಿನಗೆ ಹಾಡು 
ಕೇಳಬೇಕೆನಿಸಿದರೆ ಇಯರ್¥sóÉÇೀನ್ ಹಾಕಿಕೊಂಡು ಕೇಳು, ಇತರರಿಗೆ ಕಷ್ಟವಾಗುತ್ತೆ” ಎಂದಳು. 
ತಕ್ಷಣವೇ ಆ ಹುಡುಗ ಲೌಡ್ ಸ್ಪೀಕರ್ ಆ¥sóï ಮಾಡಿದ. ಪ್ರಿಯಾ “ಥ್ಯಾಂಕ್ಸ್” ಎಂದಳು. ಹುಡುಗ ಗಲಿಬಿಲಿಗೊಳಗಾದವನಂತೆ ಕಂಡು ಬಂದ. “ಥ್ಯಾಂಕ್ಸ್ ಏಕೆ ಹೇಳಿದಿರಿ” ಕೇಳಿದ. 
“ನಾನು ಕೇಳಿದ ತಕ್ಷಣ ನೀನು ಆ¥sóï ಮಾಡಿದ್ದಕ್ಕೆ” ಎಂದಳು. ಅಷ್ಟು ಹೊತ್ತಿನ ಪ್ರಯಾಣದಲ್ಲಿ ಮೊದಲಬಾರಿಗೆ ಮುಗುಳ್ನಕ್ಕ, ಅದೂ ಸಂಕೋಚದಿಂದ. ಪ್ರಿಯಾ ತನ್ನ ಓದನ್ನು ಮುಂದುವರೆಸಿದಳು. ಸ್ವಲ್ಪ ಹೊತ್ತಿಗೆ ಮಗುವೊಂದು ಅಳಲಾರಂಭಿಸಿತು. ಅದರ ತಾಯಿ ಅದನ್ನು ಸಮಾಧಾನ ಮಾಡತೊಡಗಿದಳು. ಎಷ್ಟು ತಾಳ್ಮೆಯಿಂದ ಆ ಮಗುವನ್ನು ಸಮಾಧಾನ ಮಾಡಿದಳೆಂದರೆ ಕೆಲವೇ ನಿಮಿಷಗಳಲ್ಲಿ ಮಗು ನಗುತ್ತಾ ಆಟವಾಡಲಾರಂಭಿಸಿತು. 
ಪಕ್ಕದಲ್ಲಿ ಕುಳಿತಿದ್ದ ಹುಡುಗ ಇಯರ್ ¥sóÉÇೀನ್ ತೆಗೆದು ಪಕ್ಕಕ್ಕಿಟ್ಟು ಒಂದು ರೈಟಿಂಗ್ ಪ್ಯಾಡ್ ತೆಗೆದುಕೊಂಡ. ಆಶ್ಚರ್ಯವೆನಿಸಿತು ಪ್ರಿಯಾಳಿಗೆ. ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಪುಸ್ತಕ ತರುವುದೇ ಕಷ್ಟ, ಅಂತಹದ್ದರಲ್ಲಿ..... ಕುತೂಹಲ ತಡೆಯಲಾಗದೆ ಅವನ ಕಡೆ ನೋಡಿದಳು. ಅವನು ಬಹಳ ತನ್ಮಯತೆಯಿಂದ ಏನೋ ಬರೆಯುತ್ತಿದ್ದ. ಕೇವಲ 15 ನಿಮಿಷದಲ್ಲಿ ಕವನವೊಂದು ರೆಡಿಯಾಗಿತ್ತು. ಕುತೂಹಲ ತಡೆಯಲಾಗದೆ 
ಓದೇಬಿಟ್ಟಳು. ಕವನ ಅದ್ಭುತವಾಗಿತ್ತು. ಅನುಭವವುಳ್ಳ ಕವಿ ಬರೆದ ಹಾಗಿತ್ತು. ತನಗೇ ಗೊತ್ತಿಲ್ಲದೆ, “ವಾಹ್, ಅದ್ಭುತ” ಎಂದಳು. ಆಗಲೇ ಅವನು ತಲೆ ಎತ್ತಿ ನೋಡಿದ. ಕಣ್ಣಲ್ಲಿ ಆಶ್ಚರ್ಯವಿತ್ತು. 
“ಸಾರಿನಪ್ಪಾ, ಓದಬಾರದಾಗಿತ್ತು. ಆದರೆ ಕುತೂಹಲ ತಡೆಯಲಾರದೆ ಓದಿಬಿಟ್ಟೆ. ಈಗನಿಸುತ್ತಿದೆ, ಓದದೇ ಇದ್ದಿದ್ದರೆ ನಷ್ಟವಾಗುತ್ತಿತ್ತು. ಎಂತಹ ಉತ್ತಮ ಕವಿತೆ. ಎಷ್ಟು ವರ್ಷದಿಂದ ಬರೆಯುತ್ತಿದ್ದೀಯಾ? ಒಳ್ಳೆ ನುರಿತ ಕವಿಯಂತೆ ಬರೆದಿದ್ದೀಯಾ” ಎಂದಳು. 
“ನಿಜವಾಗಿಯೂ ಚೆನ್ನಾಗಿದೆಯಾ?” ಕೇಳಿದ. 
“ಹೌದಪ್ಪಾ ನಿಜಕ್ಕೂ ಚೆನ್ನಾಗಿದೆ. ಈಗಷ್ಟೇ ಕಣ್ಮುಂದೆ ನಡೆದ ಒಂದು ಘಟನೆಯ ಬಗ್ಗೆ ಇಷ್ಟು ಚೆನ್ನಾಗಿ ಬರೆದಿದ್ದೀಯಾ ಎಂದರೆ ನೀನು ಸಾಮಾನ್ಯನಲ್ಲಪ್ಪ” ಎಂದಳು. ಹೆಮ್ಮೆಯಿಂದ ಅವನ ಮುಖ ಅರಳಿತು. ನಕ್ಕಾಗ ಬಹಳ ಚೆನ್ನಾಗಿ ಕಾಣುತ್ತಿದ್ದ. ಕೆನ್ನೆಯ ಮೇಲೆ ಮೂಡಿದ್ದ ಗುಳಿ ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡಿತು. 
“ಆದರೆ ಹೆಸರೇಕೆ ಇಟ್ಟಿಲ್ಲ” ಕೇಳಿದಳು. 
“ಅಮ್ಮನ ಪ್ರೀತಿಗೆ ‘ಮ’ ಅಕ್ಷರದಿಂದ ಯಾವುದಾದರೂ ಪದವಿದೆಯೇ ಎಂದು ಹುಡುಕುತ್ತಿದ್ದೇನೆ” ಎಂದ. 
ತಕ್ಷಣವೇ ಅವಳು “ಮಮತೆ” ಎಂದಳು. ಅವನದನ್ನು ಪೇಪರ್ ಮೇಲೆ ಬರೆದ “ಥ್ಯಾಂಕ್ಸ್ ಆಂಟಿ” ಎಂದ. ಮೊದಲ ಬಾರಿಗೆ ಅವನು ಆಂಟಿ ಎನ್ನುವ ಪದ ಬಳಸಿದ್ದ. ಅವಳು ಅದನ್ನು ಗಮನಿಸಿದರೂ ಗಮನಿಸದಂತೆ “ಪರವಾಗಿಲ್ಲ ಬಿಡಪ್ಪಾ” ಎಂದಳು. 
ಸ್ವಲ್ಪ ಹೊತ್ತಿನ ನಂತರ ಅವನು ಮಾತಿಗಾರಂಭಿಸಿದ. “ಆಂಟಿ ನಿಮಗೆ ಕವಿತೆ ಎಂದರೆ ಇಷ್ಟವೇ?” 
“ಹೌದಪ್ಪಾ. ಬಹಳ ಇಷ್ಟ. ಆದರೆ ನಿನ್ನಂತೆ ಬರೆಯಲು ಬರುವುದಿಲ್ಲ.” 
ಸಂಕೋಚದಿಂದ “ಅಯ್ಯೋ, ಇಲ್ಲ ಆಂಟಿ. ನೀವೊಬ್ಬರೇ ಆ ರೀತಿ ಹೇಳಿರುವುದು” ಎಂದ. 
“ಇಲ್ಲಪ್ಪ, ನಿಜವಾಗಲೂ ಚೆನ್ನಾಗಿದೆ. ನೀನು ಹೀಗೇ ಮುಂದುವರೆದರೆ ಉತ್ತಮ ಕವಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.” 
“ಅಷ್ಟು ಖಚಿತವಾಗಿ ಹೇಗೆ ಹೇಳ್ತೀರಿ?” ಕೇಳಿದ. 
“ಏಕೆಂದರೆ ನಾನು ಕಾಲೇಜಿನಲ್ಲಿ ಕನ್ನಡ ಕವಿತೆಗಳನ್ನು ಹೇಳಿಕೊಡುವ ಶಿಕ್ಷಕಿಯಾದ್ದರಿಂದ.” 
“ಹೌದಾ ಆಂಟಿ, ಮತ್ತೆ ಇಂಗ್ಲೀಷ್ ಪುಸ್ತಕ ಓದುತ್ತಿದ್ದೀರಾ?” 
“ಏಕೆ ಕನ್ನಡ ಶಿಕ್ಷಕಿಯಾದರೆ ಇಂಗ್ಲಿಷ್ ಓದಬಾರದಾ?” 
“ಹಾಗೇನಿಲ್ಲ ಆಂಟಿ” ಸ್ವಲ್ಪಹೊತ್ತು ಮೌನವಾಗಿದ್ದು, ನಂತರ “ಆಂಟಿ ನಿಜಕ್ಕೂ ನಾನು ಉತ್ತಮ ಕವಿಯಾಗ್ತೀನಾ?” ಕೇಳಿದ. 
“ನೂರು ಪರ್ಸೆಂಟ್” ಹೇಳಿದಳು. ಆಗ ಅವನ ಕಂಗಳಲ್ಲಿ ಹೊಳೆದ ಕಾಂತಿಯನ್ನು ಕಂಡು ಚಕಿತಳಾದಳು. 
ಇನ್ನೇನು ದಾವಣಗೆರೆ ಹತ್ತಿರ ಬಂದಾಗ ಅವನು “ಆಂಟಿ, ನನ್ನ ಹೆಸರು ಧನುಷ್. ನಾನು, ನಿಮ್ಮ ಅಕ್ಕನ ಮಗ ಕಾರ್ತಿಕ್ ಒಂದೇ ಕ್ಲಾಸಿನಲ್ಲಿ ಓದ್ತೀವಿ. ನಮ್ಮ ಮನೆಯ ಪಕ್ಕವೇ ಅವರ ಮನೆ ಇರುವುದು. ನಾನೇ ಕರ್ಕೊಂಡು ಹೋಗ್ತೀನಿ” ಎಂದ. 
“ಬೇಡಪ್ಪ, ಕಾರ್ತಿಕ್‍ನ ಅಣ್ಣ ಸಂಜಯ್ ಬರ್ತಾ ಇದ್ದಾನೆ. ಥ್ಯಾಂಕ್ಸ್” ಎಂದಳು. 
ಬಸ್ ಇಳಿದಾಗ ಸಂಜಯ್ ಕಾರ್ ತಂದಿದ್ದ. ಅದನ್ನು ನೋಡಿ ಪ್ರಿಯಾ, “ಧನುಷ್, ನೀನೂ ನನ್ನ ಜೊತೆ ಬಾ” ಎಂದಳು. 
ಆದರೆ ಅವನು, “ಇಲ್ಲ ಆಂಟಿ, ನನ್ನ ಗೆಳೆಯ ಬರ್ತಾನೆ. ನೀವು ಹೋಗಿ” ಎಂದ. ಸಂಜಯ್ ಧನುಷ್‍ನನ್ನು ನೋಡಿದ ತಕ್ಷಣ ಮುಖ ಸಿಂಡರಿಸಿಕೊಂಡಿದ್ದನ್ನು ಪ್ರಿಯಾ ಗಮನಿಸಿದ್ದಳು. ಆದ್ದರಿಂದ ಒತ್ತಾಯಿಸಲಿಲ್ಲ. ದಾರಿಯಲ್ಲಿ ಸಂಜಯ್, “ಅವನ ಹತ್ತಿರ ಏಕೆ ಮಾತಾಡಿದ್ರಿ ಆಂಟಿ, ಅವನೊಬ್ಬ ವೇಸ್ಟ್ ¥sóÉಲೊ. ನಮ್ಮ ಕಾರ್ತಿಕ್ ಕ್ಲಾಸ್‍ನವನೇ. 10ನೇ ತರಗತಿಯವರೆಗೂ ಚೆನ್ನಾಗಿಯೇ ಓದಿದ. 90% ಮೇಲೆ ಬಂದಿತ್ತು. ಪಿಯುಸಿಗೆ ಹೋಗಿ ಏನಾಯ್ತೊ ಗೊತ್ತಿಲ್ಲ. ಓದುವುದನ್ನೂ ಬಿಟ್ಟ. ಈಗ ನೋಡಿದಿರಲ್ಲ ಅವನ ಅವತಾರಾನಾ. ಓದುವುದಿಲ್ಲ, ಬರೆಯುವುದಿಲ್ಲ. ಪ್ರಥಮ ಪಿಯುಸಿ 40% ತಗೊಂಡು ಹೇಗೊ ಪಾಸಾದ. ಅದಕ್ಕೆ ಈಗ ನಾವು ಕಾರ್ತಿಕ್‍ನಿಗೆ ಅವನೊಂದಿಗೆ ಮಾತನಾಡಲು ಬಿಡುವುದಿಲ್ಲ” ಕೇಳಿ ದಂಗಾದಳು ಪ್ರಿಯಾ. 
ಅಷ್ಟು ಸುಂದರ ಕವಿತೆಯನ್ನು ರಚಿಸುವ ಹುಡುಗ ಓದುವುದಿಲ್ಲ, ತಿರುಗುತ್ತಾನೆ, ತಂದೆ-ತಾಯಿಯರನ್ನೂ ಗೌರವಿಸುವುದಿಲ್ಲ ಎಂದರೆ ನಂಬುವುದಾದರೂ ಹೇಗೆ? ಏನೋ ಸಮಸ್ಯೆಯಿರಬೇಕು ಎಂದುಕೊಂಡಳು. ನಂತರ ಮಾತು ಅಕ್ಕ-ಭಾವ, ಮನೆ ಇತ್ಯಾದಿ ಕಡೆ ಹೊರಳಿತು. ಮನೆಗೆ ಬಂದು ಊಟ ಮಾಡಿ ರೆಸ್ಟ್ ತಗೊಂಡು ಸಂಜೆ ವಾಕಿಂಗ್ ಹೋಗುವುದೆಂದು ಹೊರಟಳು. ಅಕ್ಕನಿಗೆ ಏನೊ ಕೆಲಸವಿದ್ದುದ್ದರಿಂದ ತಾನೇ ಹತ್ತಿರದ ಪಾರ್ಕಿಗೆ ಹೋಗುವೆನೆಂದು ಹೊರಟಳು. ಮನೆಯಿಂದ ಹೊರಟಾಗ ಪಕ್ಕದ ಮನೆಯ ಕಾಂಪೌಂಡ್‍ನಲ್ಲಿ ಧನುಷ್ ಕಾಣಿಸಿಕೊಂಡ. “ಹಾಯ್” ಎಂದಳು. ಅವನು ಸಂಕೋಚದಿಂದಲೇ “ಹಲೊ ಆಂಟಿ” ಎಂದು ಒಳಗೆ ಹೊರಟುಹೋದ. ಸ್ವಲ್ಪ ದೂರ ಹೋಗುತ್ತಿದ್ದ ಹಾಗೆ ಯಾರೋ ‘ಆಂಟಿ’ಎಂದು ಕರೆದ ಹಾಗಾಯಿತು. ಈ ಊರಿನಲ್ಲಿ ಯಾರಪ್ಪಾ ಎಂದು ತಿರುಗಿನೋಡಿದರೆ ಧನುಷ್ ಓಡೋಡಿ ಬರುತ್ತಿದ್ದ, ನಿಂತಳು. 
“ಮನೆಯ ಹತ್ತಿರ ಮಾತನಾಡಿಸಿದರೆ ಸರಿಯಾಗಿ ಮಾತಾಡಲಿಲ್ಲ” ಆಕ್ಷೇಪಿಸಿದಳು. 
“ಹಾಗಲ್ಲ ಆಂಟಿ, ನಿಮ್ಮ ಮನೆಯವರಿಗೆ ನನ್ನ ಕಂಡರೆ ಆಗುವುದಿಲ್ಲ. ಅವರು ನಿಮಗೆ ಏನಾದರೂ ಅಂತಾರೇನೋ ಅಂತ ಮಾತನಾಡಲಿಲ್ಲ. ನಿಮಗೆ ಕೂಡ ಏನು ಹೇಳಿರ್ತಾರೊ. ನೀವು ಮಾತಾಡ್ತೀರೊ ಇಲ್ಲವೊ ಎಂದುಕೊಂಡೆ. ಆದರೆ ನೀವು ಹಾಯ್ ಎಂದಾಗ ತುಂಬಾ ಸಂತೋಷ ಆಯಿತು. ಅದಕ್ಕೆ ಬಂದೆ.” 
ಪಾರ್ಕಿಗೆ ಹೋಗಿ ವಾಕಿಂಗ್ ಮಾಡುತ್ತಲೇ, “ನಮ್ಮ ಮನೆಯವರಿಗೆ ನಿನ್ನನ್ನು ಕಂಡರೆ ಏಕೆ ಆಗುವುದಿಲ್ಲ” ಕೇಳಿದಳು. 
“ನಾನು ಓದುವುದಿಲ್ಲ, ಹೀಗೆ ತಿರುಗ್ತೀನಿ ಎಂದು.” 
ಅಲ್ಲಿಯೇ ಬೆಂಚಿನ ಮೇಲೆ ಕುಳಿತು, “ಯಾಕೆ ಧನುಷ್, ಅಷ್ಟು ಉತ್ತಮ ಕವಿತೆಯನ್ನು ಬರೆಯುವವನು, ಓದಲ್ಲ ಎಂದರೆ ಹೇಗೆ?” ಕೇಳಿದಳು. 
“ಅದೊಂದು ದೊಡ್ಡ ಕಥೆ.” “ಸರಿ ಶುರು ಮಾಡು.” 
“ಆಂಟಿ ಇವತ್ತು ಲೇಟಾಗುತ್ತೆ. ನಾಳೆ ಬೆಳಿಗ್ಗೆ ಹೇಳ್ತೀನಿ.” 
“ನಾಳೆ ನಾನು ಹರಿಹರ ನೋಡಲು ಹೋಗ್ತಿದ್ದೀನಿ, ಸಂಜೆ ಎಷ್ಟೊತ್ತಾಗುತ್ತೋ?” 
“ಆಂಟಿ ನಾನೂ ನಿಮ್ಮ ಜೊತೆ ಬರ್ತೀನಿ.” “ಕಾಲೇಜಿಲ್ವಾ?” 
“ಇದೆ ಆಂಟಿ. ಆದ್ರೆ ಹೋಗೊಲ್ಲ.” “ಯಾಕೆ? ನನಗದು ಇಷ್ಟವಾಗೋಲ್ಲ.” 
“ಪ್ಲೀಸ್ ಆಂಟಿ. ಇಷ್ಟು ದಿನದಲ್ಲಿ ನನಗೆ ಯಾರೊಂದಿಗೂ ನನ್ನ ಸಮಸ್ಯೆ ಹೇಳಿಕೊಳ್ಳಬೇಕು ಎನಿಸಿರಲಿಲ್ಲ. ಆದ್ರೆ ನೀವು ಮಾತನಾಡುವ ಧಾಟಿ ನೋಡಿದ್ರೆ ನನ್ನ ಸಮಸ್ಯೆ ಅರ್ಥ ಮಾಡಿಕೊಳ್ತೀರಾ ಅನಿಸುತ್ತೆ. ಪ್ಲೀಸ್ ಆಂಟಿ.”
‘ನೋಡೋಣ ಅವನ ಸಮಸ್ಯೆ ಏನಿರಬಹುದೆಂದೆನಿಸಿ, “ಸರಿ ಹಾಗೆ ಮಾಡು. ಬೆಳಗ್ಗೆ 9.3ಂಕ್ಕೆ ಮನೆ ಬಿಡ್ತೀನಿ” ಎಂದಳು. 
“ಆಂಟಿ, ಮನೆ ಹತ್ತಿರ ಬೇಡ. ಬಸ್‍ಸ್ಟಾಪ್‍ನಲ್ಲಿ 10ಕ್ಕೆ ಇರ್ತೀನಿ.” 
ಸರಿ ಎಂದು ವಾಪಾಸ್ಸಾಗುತ್ತಾ, ಇನ್ನೇನು ಮನೆ ಬಂತು ಎನ್ನವ ಕ್ರಾಸ್‍ನಲ್ಲಿ “ಆಂಟಿ ನೀವು ಹೋಗಿ ನಾನು ಬರ್ತೀನಿ” ಎಂದು ಹೊರಟುಹೋದ. ಮನೆಗೆ ಹಿಂತಿರುಗಿದಾಗ ಭಾವ ಬಂದಿದ್ದರು. ಎಲ್ಲರೂ ಮಾತನಾಡುತ್ತಾ, ಊಟ ಮಾಡಿದ ನಂತರ ಹರಿಹರಕ್ಕೆ ಹೋಗುವ ಪ್ಲಾನ್ ತಿಳಿಸಿದೆ. ಭಾವ “ಅಯ್ಯೋ, ನನಗೆ ರಜಾ ಇಲ್ವಲ್ಲಮ್ಮಾ” ಎಂದರು. 
“ಪರವಾಗಿಲ್ಲ ಭಾವ. ನನ್ನ ಗೆಳತಿಯೊಬ್ಬಳು ಅಲ್ಲಿಯೇ ಲೆಕ್ಚರರ್. ಅವಳಿಗೆ ¥sóÉÇೀನ್ ಮಾಡಿದ್ದೇನೆ. ಬಸ್ ಸ್ಟಾಪ್‍ಗೆ ಬರುತ್ತಾಳೆ.” 
ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಧನುಷ್ ಬಸ್‍ಸ್ಟಾಂಡ್‍ನಲ್ಲಿ ಕಾಯುತ್ತಿದ್ದ. ಬಸ್ ಹೊರಟ ಮೇಲೆ “ಈಗ ಹೇಳು ನಿನ್ನ ಕಥೆ” ಎಂದಳು. 
ಸಂಕೋಚದಿಂದಲೇ ಆರಂಭಿಸಿದ. “ಆಂಟಿ ಎಲ್ಲರೂ ಇಂಜಿನಿಯರ್, ಡಾಕ್ಟರ್ ಆಗಬೇಕೇ? ಇಲ್ಲದಿದ್ದರೆ ಅವರಿಗೇನೂ ಬೆಲೆ ಇರುವುದಿಲ್ಲವೇ?” ಕೇಳಿದ. 
“ಯಾರಪ್ಪಾ ಹೇಳಿದ್ದು, ಹಾಗೆ ಅಂತಾ. ನಾನೇ ಇಲ್ಲವಾ ಕನ್ನಡ ಮೇಡಮ್” ನಕ್ಕಳು. 
“ನೀವೊಬ್ರು ಹೀಗೆ ಹೇಳ್ತೀರಾ ಆಂಟಿ. ಆದ್ರೆ ಎಲ್ಲರೂ ಹೇಳೋದು ಬೇರೆ.” 
“ಬಿಡಿಸಿ ಹೇಳು.” “ಆಂಟಿ ನನಗೆ ಈ ಬರೆಯೋ ಹವ್ಯಾಸ 6ನೇ ಕ್ಲಾಸಿನಿಂದಲೂ ಇದೆ. 10ನೇ ಕ್ಲಾಸಿನಲ್ಲಿ 94% ತೆಗೆದೆ. ಆಮೇಲೆ ಪಿಯುಸಿ ಆರ್ಟ್ಸ್s ತೆಗೆದುಕೊಂಡು ಕನ್ನಡ ಮೇಜರ್ ತೆಗೆದುಕೊಳ್ಳಬೇಕು, ಕನ್ನಡ ಎಮ್.ಎ ಮಾಡಬೇಕು ಎಂದುಕೊಂಡೆ. 
ಅದಕ್ಕೆ ಮನೆಯಲ್ಲಿ ಎಲ್ಲರೂ ಒಂದೇ ಸಮನೆ ಬೈದರು. ಆಗುವುದಾದರೆ ಇಂಜಿನಿಯರ್ ಆಗಲೇಬೇಕು. ಅದು ಬೇಡ ಅಂದ್ರೆ ಡಾಕ್ಟರ್ ಆಗು ಅಂದ್ರು. ನನಗೆ ಎರಡೂ ಇಷ್ಟವಿರಲಿಲ್ಲ. ದೊಡ್ಡ ರಾದ್ಧಾಂತವಾಯಿತು.” 
“ಕೊನೆಗೆ ಅಪ್ಪ ಅಮ್ಮ ಪಟ್ಟು ಹಿಡಿದು ಪಿಯುಸಿ ಸೈನ್ಸ್‍ಗೆ ಸೇರಿಸಿದರು. ನಾನು ಅಸಹಾಯಕನಾಗಿದ್ದೆ. ನೀನು ಕೇಳಿದ್ದನ್ನೆಲ್ಲಾ ತೆಗೆಸಿಕೊಡ್ತೀವಿ. ಆದ್ರೆ ಪಿಯುಸಿ 95% ತೆಗೆದು ಇಂಜಿನಿಯರ್ ಆಗು ಎನ್ನುವುದು ಅವರ ಜಪ. ನಾನೇನು ಮಾಡಲಿ. ಅವರ ಮೇಲೆ ಕೋಪ ಬಂತು. ಹೇಗೆ ತೀರಿಸಿಕೊಳ್ಳಲಿ? ಅದಕ್ಕೆ ಈ ರೀತಿಯಾದೆ. ಅವರ ಮೇಲೆ ಸೇಡು ತೀರಿಸಿಕೊಳ್ತಿದ್ದೀನಿ. ಅವರು ಏನೇನು ಮಾಡಬಾರದು ಎಂದು ಹೇಳ್ತಾರೊ ಅದೆಲ್ಲವನ್ನೂ ನಾನು ಮಾಡ್ತಾ ಇದ್ದೀನಿ. ಈ ಕೂದಲು ನೋಡಿ, ಇದು ನನಗೇ ಇಷ್ಟ ಇಲ್ಲ. ಆದ್ರೆ ಅವರಿಗೆ ಕೋಪ ಬರಲಿ ಎಂದೇ ಈ ರೀತಿ ಮಾಡ್ತೀನಿ.” 
ಆವೇಶದಿಂದ ಅವನ ಮುಖ ಕೆಂಪಾಗಿ ಹೋಗಿತ್ತು. ಆ ಮುಗ್ಧ ಮುಖದ ಹಿಂದೆ ಇಷ್ಟು ನೋವಿತ್ತೆಂದು ಅರಿತಾಗ ಆಘಾತವಾಗಿತ್ತು ಪ್ರಿಯಾಳಿಗೆ. ಏನು ಹೇಳುವುದು ಎನ್ನುವಷ್ಟರಲ್ಲಿ ಬಸ್ ಹರಿಹರ ತಲುಪಿತ್ತು. 
ಬಸ್‍ಸ್ಟಾಂಡ್‍ನಲ್ಲಿ ಗೆಳತಿ ಅನುಪಮಾ ಕಾಯುತ್ತಿದ್ದಳು. ಇವಳನ್ನು ಮಾತನಾಡಿಸಿದ ಅನುಪಮಾ ಪಕ್ಕದಲಿದ್ದ ಹುಡುಗನನ್ನು ನೋಡಿ, “ಅಕ್ಕನ ಮಗನಾ” ಕೇಳಿದಳು. 
“ಅಲ್ಲ, ನನ್ನ ಪುಟ್ಟ ಸ್ನೇಹಿತ” ಎಂದು ಹೇಳಿ ಬಸ್ ಕಥೆಯನ್ನು ಹೇಳಿದ್ದಷ್ಟೇ ಅಲ್ಲದೆ “ಇವನು ಬಹಳ ಉತ್ತಮ ಕವಿ” ಎಂದು ಪರಿಚಯಿಸಿದಳು. ಧನುಷ್‍ಗೆ ಎಷ್ಟು ಸಂತೋಷವಾಗಿತ್ತೆಂದರೆ ಮಾತೇ ಹೊರಡಲಿಲ್ಲ. ಮೂವರು ಹೋಟೆಲ್‍ಗೆ ಹೋಗಿ ತಿಂಡಿ ತಿಂದು, ದೇವಸ್ಥಾನ, ಹೊಳೆ ಎಲ್ಲವನ್ನೂ ನೋಡಿದರು. ಅನುಪಮಾ ಬೇಗ ಊಟ ಮುಗಿಸಿ ಕ್ಲಾಸ್ ಇದೆ ಎಂದು ಹೇಳಿ ಹೊರಟುಹೋದಳು. 
 “ಈಗ ಹೇಳು, ಡಾಕ್ಟರ್, ಇಂಜಿನಿಯರ್ ಆದ್ರೆ ಮಾತ್ರ ಗೌರವಿಸ್ತಾರಾ?” 
“ಇಲ್ಲ ಆಂಟಿ, ಆದ್ರೆ ಅಪ್ಪ-ಅಮ್ಮ.......?” 
“ಅವರಿಗೆ ಹೇಳುವುದು ನಂತರ. ಆದ್ರೆ ಅದಕ್ಕಾಗಿ ನಿನ್ನ ಮೇಲೆ ನೀನೇ ಸೇಡು ತೀರಿಸಿಕೊಳ್ಳುತ್ತಿದ್ದೀಯಲ್ಲಾ?” 
“ನನ್ನ ಮೇಲೆ ನಾನಾ? ಅದು ಹೇಗೆ ಆಂಟಿ?” 
“ಮತ್ತಿನ್ನೇನು, ಈ ಕೂದಲು ನಿನಗಿಷ್ಟವಿಲ್ಲ, ಈ ಓಲೆ, ಈ ಕಡಗ, ಅದು ಬಿಡು, ಚೆನ್ನಾಗಿ ಓದುವ ನೀನು ಈಗ 40% ತೆಗೆದು ಎಲ್ಲರೂ ಛೀ ಎನ್ನುವ ಮಟ್ಟಕ್ಕೆ ಬಂದಿದ್ದೀಯಾ ಎಂದರೆ....” 
“ಅಂದರೆ 90% ತೆಗೆದರೆ ಮಾತ್ರ ಎಲ್ಲರೂ ನನ್ನನ್ನು ಗೌರವಿಸಬೇಕೇ?” 
“ಖಂಡಿತ ಆ ರೀತಿ ಅಲ್ಲ. ಆದ್ರೆ ನಿನ್ನ ಸಾಮರ್ಥ್ಯ ಹಾಳಾಗ್ತಾ ಇದ್ದರೆ ಎಲ್ಲರೂ ಅದನ್ನೇ ಬೆಟ್ಟು ಮಾಡಿ ತೋರಿಸ್ತಾರೆ. ನಿನ್ನ ಸಾಧನೆಯನ್ನು ತೋರಿಸಬೇಕೆ ಹೊರತು ನಿನ್ನ ಸಾಮರ್ಥ್ಯ ಹಾಳುಮಾಡಿಕೊಳ್ಳಬಾರದು.” 
“ಹಾಗಿದ್ದರೆ ನಾನು ಏನು ಮಾಡಬೇಕು?” 
“ನೀನು ಪಿಯುಸಿ ಸೈನ್ಸ್ ತೆಗೆದುಕೊಂಡಿದ್ದೀಯಾ. ನಿನಗೆ ಓದುವುದೇನೂ ಕಷ್ಟವಲ್ಲ. ಚೆನ್ನಾಗಿ ಓದು. ನಿನ್ನ ಕವಿತೆಯ ಬರವಣಿಗೆಯನ್ನೂ ಮುಂದುವರೆಸು. ಕವನಗಳನ್ನು ಪತ್ರಿಕೆಗೆ ಕಳಿಸು. ನಿನ್ನ ಮನೆಯವರಿಗೆ ಆ ರೀತಿ ತೋರಿಸು.” 
“ಇಲ್ಲ ಆಂಟಿ. ನಾನು 50% ತೆಗೆದ್ರೂ ದುಡ್ಡು ಕೊಟ್ಟಾದ್ರೂ ಇಂಜಿನಿಯರಿಂಗ್ ಸೇರಿಸ್ತಾರೆ.” 
“ಆ ಬಗ್ಗೆ ನೀನೇನೂ ಯೋಚ್ನೆ ಮಾಡಬೇಡ. ನಾನು ನಿನ್ನ ತಂದೆ-ತಾಯಿಯರ ಹತ್ತಿರ ಮಾತಾಡ್ತೀನಿ. ಆದ್ರೆ ನಿನ್ನ ವ್ಯಕ್ತಿತ್ವವನ್ನು ನೀನು ಹಾಳು ಮಾಡಿಕೊಳ್ಳಬೇಡ.” 
“ಇಲ್ಲ ಆಂಟಿ. ನೀವು ಹೇಗೆ ಹೇಳಿದ್ರೆ ಹಾಗೆ ಮಾಡ್ತೀನಿ.” 
“ಆ ರೀತಿ ಹೇಳುವುದೂ ಸರಿಯಲ್ಲ ಧನುಷ್. ನೀನು ಯೋಚಿಸಿ ನಿರ್ಧಾರ ತೆಗೆದುಕೊ.” 
“ಸರಿ ಆಂಟಿ” ಎಂದು ಬಿಲ್ಲು ಕೊಡಲು ಕೈಗೆತ್ತಿಕೊಂಡ. 
“ಅದೆಲ್ಲಾ ನೀನು ದುಡಿಯಲು ಶುರು ಮಾಡಿದ ಮೇಲೆ” ಎನ್ನುತ್ತಾ ತಾನೇ ಬಿಲ್ಲು ನೀಡಿದಳು ಪ್ರಿಯಾ. 
“ಆಂಟಿ ನೀವು ಎಲ್ಲರಿಗಿಂತ ಬಹಳ ಭಿನ್ನ” ಎಂದ. ನಕ್ಕಳು ಪ್ರಿಯಾ. ಇಬ್ಬರೂ ಮನೆಯವರೆಗೂ ಜೊತೆಯಾಗಿಯೇ ಬಂದರು. ಧನುಷ್ ಬೇಡವೆಂದರೂ ಪ್ರಿಯಾ ಕರೆದುಕೊಂಡು ಬಂದಳು. 
ಅಕ್ಕ ಅದನ್ನು ಕಂಡು ಅಸಮಾಧಾನದಿಂದಲೇ “ನಿನಗೆ ಎಲ್ಲಿ ಸಿಕ್ಕಿದ ಅವನು?” ಎಂದಳು. 
“ನನ್ನೊಂದಿಗೆ ಹರಿಹರಕ್ಕೆ ಬಂದಿದ್ದ.” 
ಹೌಹಾರಿದಳು ಅಕ್ಕ. “ಏನಾಯ್ತೆ ನಿನಗೆ? ಅದೂ ಅವನ ಜೊತೆ......” 
“ಅಕ್ಕ ನಾನು ಒಬ್ಬ ಶಿಕ್ಷಕಿ ಎನ್ನುವುದನ್ನು ಮರೆಯಬೇಡ. ಧನುಷ್ ಬಹಳ ಒಳ್ಳೆಯ ಹುಡುಗ.” 
“ಹೌದಮ್ಮ ಹೌದು, ನೀನೊಬ್ಬಳೇ ಹೇಳಬೇಕು” ವ್ಯಂಗ್ಯವಾಡಿದಳು. 
“ಅಲ್ಲಕ್ಕ ಕಾರ್ತಿಕ್‍ನೇ ಹೀಗೆ ವರ್ತಿಸಿದ ಎಂದುಕೊ ಆಗ ಏನು ಮಾಡ್ತಿದ್ದೆ?” 
“ನಾನಾ? ಅವನ ಕಾಲು ಮುರಿದು ಮನೆಯಲ್ಲಿ ಕೂರಿಸ್ತಿದ್ದೆ” 
ಆಶ್ಚರ್ಯಚಕಿತಳಾಗಿ ನೋಡಿದಳು ಪ್ರಿಯಾ. ವಿದ್ಯಾವಂತೆಯಾದ ತನ್ನಕ್ಕ ಮಾತನಾಡಿದ ರೀತಿ ಅವಳಿಗೆ ಸರಿಯೆನಿಸಲಿಲ್ಲ. 
ಮಾರನೆ ದಿನ ಬೆಳಗ್ಗೆ ಧನುಷ್ ಮನೆಗೆ ಹೋಗಲೆಂದು ಹೊರಗೆ ಬಂದವಳಿಗೆ ಧನುಷ್ ಕಾಣಿಸಿದಾಗ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಹೇರ್ ಕಟ್ ಮಾಡಿಸಿದ್ದ, 
ಕಿವಿಯಲ್ಲಿ ಓಲೆ, ಕೈಯಲ್ಲಿ ಕಡಗವಿರಲಿಲ್ಲ. ನೂರಾರು ಜೇಬಿದ್ದ ಪ್ಯಾಂಟ್‍ಗೆ ಬದಲಾಗಿ ನೀಲಿಯ ಜೀನ್ಸ್ ಪ್ಯಾಂಟ್ ಹಾಕಿ ಅದೇ ಬಣ್ಣದ ಟೀಶರ್ಟ್ ಹಾಕಿದ್ದ. 
“ವಾಹ್, ಏನು ಬದಲಾವಣೆ” ಎಂದಳು. 
“ಚೆನ್ನಾಗಿದ್ದೀನಾ ಆಂಟಿ?” ಹತ್ತಿರ ಬಂದ. 
“ನಿಜಕ್ಕೂ ಚೆನ್ನಾಗಿದೆ.” 
ಗೇಟಿನ ಹತ್ತಿರ ಇವಳನ್ನು ಕಂಡ ಧನುಷ್ ತಾಯಿ, “ಓಹ್ ನೀವೇನಾ 
ಕಾರ್ತಿಕ್‍ನ ಚಿಕ್ಕಮ್ಮ, ಬನ್ನಿ ಒಳಗೆ” ಎಂದರು. 
ಒಳಗೆ ಹೋಗುತ್ತಲೇ “ಕುಳಿತುಕೊಳ್ಳಿ, ಟೀ ಮಾಡಿಕೊಂಡು ಬರ್ತೀನಿ ಇರಿ” 
ಎಂದರು. 
“ಬೇಡ ಬನ್ನಿ, ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು” ಎಂದಳು. 
“ಆಂಟಿ, ನಾನು ಟೀ ಮಾಡ್ಕೊಂಡು ಬರ್ತೀನಿ” ಅಂದ ಧನುಷ್. 
ಪ್ರಿಯಾಳ ಮುಖದ ಮೇಲಿನ ಗಾಬರಿಯನ್ನು ಗಮನಿಸಿ, “ಆಂಟಿ,  ಗಾಬರಿಯಾಗಬೇಡಿ. ನಾನು ಬಹಳ ಚೆನ್ನಾಗಿ ಟೀ ಮಾಡ್ತೀನಿ” ಎಂದು ಒಳಗೆ ಹೋದ. ಸಂಜಯ್ ತಾಯಿಯ ಕಣ್ಣಲ್ಲಿ ಸಂತಸ ಕಂಡಳು ಪ್ರಿಯಾ. 
ಅವನ ತಾಯಿ ಹೆಚ್ಚು ಓದಿದಂತೆ ಕಾಣಲಿಲ್ಲ. ಒಬ್ಬನೇ ಮಗ. ಅವನದ್ದೇ ಚಿಂತೆಯಲ್ಲಿ ಸೊರಗಿದಂತಿತ್ತು. “ನಿಮಗೆ ತುಂಬಾ ಥ್ಯಾಂಕ್ಸ್. ನಿಮ್ಮಿಂದಲೇ ಅವನಲ್ಲಿ ಈ ಬದಲಾವಣೆ” ಎಂದರು. 
ಪ್ರಿಯಾ ನೇರವಾಗಿ ವಿಷಯಕ್ಕೆ ಬಂದಾಗ, “ಓದಿನ ಬಗ್ಗೆ ನನಗೆ ಅಷ್ಟೆಲ್ಲಾ ತಿಳಿಯದಮ್ಮಾ. ಎಲ್ಲಾ ನೆಂಟರಿಷ್ಟರ ಮಕ್ಕಳು ಇಂಜಿನಿಯರಿಂಗ್ ಓದುತ್ತಿರುವಾಗ, ಅದೂ ಇವನಿಗಿಂತ ಕಡಿಮೆ ಅಂಕಗಳನ್ನು ತೆಗೆದುಕೊಂಡವರು, ನಮಗೂ ಅದೇ ಆಸೆಯಾಯ್ತು. ಆದ್ರೆ ಅದರಿಂದ ನನ್ನ ಮಗ ಹೀಗಾಗ್ತಾನೆ ಅಂತ ತಿಳ್ಕೊಂಡಿರಲಿಲ್ಲ” ಎಂದರು. 
ಧನುಷ್ ಟೀ ಮಾಡಿಕೊಂಡು ಬರುವಷ್ಟರಲ್ಲಿ ತಾಯಿಯ ಮುಖ ಪೂರ್ಣ ಅರಳಿತ್ತು. “ತುಂಬಾ ಚೆನ್ನಾಗಿದೆ ಧನು” ಎಂದಾಗ ತಲೆಯೆತ್ತಿ ನೋಡಿದ ಧನುಷ್ ಅಮ್ಮನ ಬಳಿ ಇದ್ದ ಪೇಪರ್ ಗಮನಿಸಿದ. ಏನೆಂದು ನೋಡಿದರೆ ಅದು ಅವನದ್ದೇ ಕವನ ‘ಮಾತೆಯ ಮಮತೆ’ಯಾಗಿತ್ತು. ಅದನ್ನು ಪ್ರಿಯಾ ಇಟ್ಟುಕೊಂಡಿದ್ದಳು. 
ಅಮ್ಮನ ಹೊಗಳಿಕೆ ಕೇಳಿ ಧನುಷ್‍ಗೆ ಖುಷಿಯನ್ನು ತಡೆದುಕೊಳ್ಳಲಾಗದೆ ಅಮ್ಮನ ಹತ್ತಿರ ಬಂದು ಅವಳ ತೊಡೆಯ ಮೇಲೆ ತಲೆಯಿಟ್ಟು ಅಳಲಾರಂಭಿಸಿದ. 
“ಅಮ್ಮಾ ನನ್ನನ್ನು ಕ್ಷಮಿಸಿಬಿಡು. ನಿನಗೆ ತುಂಬಾ ನೋವು ಕೊಟ್ಟಿದ್ದೇನೆ. ಇನ್ನೆಂದೂ ಹಾಗೆ ಮಾಡಲಾರೆ” ಎಂದ. ಅದನ್ನು ಕೇಳಿ ಆಕೆಯೂ ಅತ್ತರು. 
“ಧನುಷ್, ನೀನು ಏನೇ ಓದಿದರೂ ಓದಿಸಲು ಅಮ್ಮ ತಯಾರಾಗಿದ್ದಾರೆ. ಈಗ ನೀನೂ ಸಹ ನಿನ್ನ ಸಾಮರ್ಥ್ಯವನ್ನು ತೋರಿಸು” ಎಂದಳು. 
ಮಾರನೇ ದಿನ ಬಸ್ ಹತ್ತಿಸಲು ಧನುಷ್ ಬಂದಿದ್ದ. “ಆಂಟಿ, ಇನ್ನೂ ಸ್ವಲ್ಪ ದಿನ ಇರಬೇಕಿತ್ತು” ಎಂದ. 
“ಮತ್ತೆ ಬರ್ತೀನಿ, ಅಷ್ಟರಲ್ಲಿ.........” “ಗೊತ್ತು, ಗೊತ್ತು ಆಂಟಿ.” 
ಊರಿಗೆ ಬಂದ ನಂತರವೂ ಪ್ರತಿನಿತ್ಯ ¥sóÉÇೀನ್ ಮಾಡುತ್ತಿದ್ದ. ಪತ್ರ ಬರೆದು ತನ್ನ ಕವನಗಳನ್ನು ಕಳಿಸುತ್ತಿದ್ದ. ಧನುಷ್‍ನ ತಾಯಿಯೂ ¥sóÉÇೀನ್ ಮಾಡುತ್ತಿದ್ದರು. ಪಿಯುಸಿಯಲ್ಲಿ ಅವನಿಗೆ 96% ಬಂದಿತ್ತು. ಅವನು ಬಿಎಗೆ ಸೇರಿ ಮೇಜರ್ ಕನ್ನಡ ತೆಗೆದುಕೊಂಡ ಸುದ್ದಿಯೂ ತಿಳಿಯಿತು. ಅದೊಂದು ದಿನ ಪ್ರಿಯಾಗೆ ಪಾರ್ಸಲ್ ಬಂದಿತ್ತು. ಕಳಿಸಿದವರ 
ವಿಳಾಸವಿರಲಿಲ್ಲ. ಬಿಚ್ಚಿ ನೋಡಿದರೆ ಕವನ ಸಂಕಲನ. 5 ಪುಸ್ತಕಗಳಿದ್ದವು. 
‘ಯಾರದಪ್ಪ’ ಎಂದು ನೋಡಿದರೆ ಹೆಸರೇನೋ ಇತ್ತು. ‘ಯಾರೋ ಗೊತ್ತಿಲ್ಲವಲ್ಲ’ ಎಂದುಕೊಂಡು ಪುಟ ತಿರುವಿಹಾಕಿದಳು. ಅರ್ಪಣೆ ಎನ್ನುವ ಕಡೆಯಲ್ಲಿ ‘ಜೀವ ಕೊಟ್ಟ ತಾಯಿಗೆ’ ಮತ್ತು ಅದರ ಕೆಳಗೆ ‘ದಾರಿ ತೋರಿದ ತಾಯಿಗೆ’ ಎಂದಿತ್ತು. 
ತಕ್ಷಣವೇ ಮಿಂಚೊಂದು ಸುಳಿದು ಬೆನ್ನುಡಿಯನ್ನು ನೋಡಿದರೆ ಅಲ್ಲಿ ಕವಿಪರಿಚಯದಲ್ಲಿ ಧನುಷ್‍ನ ¥sóÉÇೀಟೋ ಇತ್ತು. ಪ್ರಿಯಾಳ ಸಂತೋಷಕ್ಕೆ ಎಣೆಯೇ ಇರಲಿಲ್ಲ. ತಕ್ಷಣವೇ ಧನುಷ್‍ಗೆ ¥sóÉÇೀನ್ ಮಾಡಲು ಮೊಬೈಲ್ ಕೈಗೆತ್ತಿಕೊಂಡಳು. .