ಹಿಂದಿ ಮತ್ತು ಉರ್ದು ಸಾಮಾಜಿಕ ಸಾಹಿತ್ಯದ ಆರಂಭಕರ್ತರಾದ ಪ್ರೇಮ್ ಚಂದ್ ರವರು ಅಜೈಬ್ ರಾಯ್ ಮತ್ತು ಆನಂದಿ ದೇವಿಯವರಿಗೆ ನಾಲ್ಕನೆ ಮಗುವಾಗಿ ಜನಿಸಿದರು. ಮೊದಲಿಗೆ, ಲಾಲ್‍ಪುರದ ಮದ್ರಸದಲ್ಲಿ ಶಿಕ್ಷಣ, ಪರ್ಶಿಯನ್ ಮತ್ತು ಉರ್ದು ಕಲಿತರು. ನಂತರ ಮಿಷನರಿ ಶಾಲೆಯಲ್ಲಿ ಇಂಗ್ಲಿಷ್ ಕಲಿತರು. 8ನೇ ವಯಸ್ಸಿಗೆ ತಾಯಿಯ ಮರಣ ಮತ್ತು ತಂದೆಯ ಮರುವಿವಾಹದೊಂದಿಗೆ ಸಮಸ್ಯೆಗೆ ಒಳಗಾದರು. ಮಲತಾಯಿಯೊಂದಿಗೆ ಉತ್ತಮ ಸಂಬಂಧವಿರಲಿಲ್ಲ. ಒಂಟಿತನ ಅನುಭವಿಸಿದ ಅವರು ಪುಸ್ತಕಗಳನ್ನು ಓದುತ್ತಾ ತಮ್ಮ ನೋವನ್ನು ಮರೆಯಲಾರಂಭಿಸಿದರು. ತಂದೆ 1897ರಲ್ಲಿ ತೀರಿಕೊಂಡಾಗ ಕುಟುಂಬದ ಜವಾಬ್ದಾರಿಯನ್ನು ಹೊರಲು ಅವರು ತಮ್ಮ ಓದನ್ನು ಬಿಡಬೇಕಾಗಿ ಬಂದಿತು. ಕೆಲವು ವರ್ಷಗಳ ಕಾಲ ಟ್ಯೂಷನ್ ಟೀಚರ್ ಆಗಿ ಕಷ್ಟಪಟ್ಟರು. 1900 ರಲ್ಲಿ ಬಹ್ರೆಚ್‍ನಲ್ಲಿ ಸರ್ಕಾರಿ ಜಿಲ್ಲಾ ಶಾಲೆಯಲ್ಲಿ ಅಸಿಸ್ಟೆಂಟ್ ಟೀಚರ್ ಆಗಿ ಕೆಲಸ ಸಿಕ್ಕಿತು. ಅದೇ ಸಮಯದಲ್ಲಿ ನವಾಬ್ ರಾಯ್ ಎನ್ನುವ ಹೆಸರಿನಲ್ಲಿ ಬರೆಯಲಾರಂಭಿಸಿದರು.
ಪುಸ್ತಕಗಳನ್ನು ಮಾರುವ ಕೆಲಸವನ್ನು ಮಾಡಿ ಆ ಮೂಲಕ ಬಹಳ ಪುಸ್ತಕಗಳನ್ನು ಓದಲು ಅವಕಾಶವನ್ನು ಕಲ್ಪಿಸಿಕೊಂಡರು. ಇಂಗ್ಲಿಷ್ ಕಲಿತ ಮೇಲೆ ಜಾರ್ಜ್ ರೇನಾಲ್ಡ್‍ಸ್‍ರವರ 8 ಸಂಪುಟವಿರುವ ಲಂಡನ್ ಕೋರ್ಟ್‍ನ ಮಿಸ್ಟರಿಸಿ ಎನ್ನುವ ಓದಿದರು. ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದರಿಂದ ಕ್ವೀನ್ಸ್ ಕಾಲೇಜಿಗೆ ಸೇರಲಾಗಲಿಲ್ಲ, ಸೆಂಟ್ರಲ್ ಹಿಂದೂ ಕಾಲೇಜಿನಲ್ಲಿ ಅವರ ಗಣಿತದಲ್ಲಿ ವೀಕ್ ಇದ್ದದ್ದರಿಂದ ಸೀಟು ಸಿಗಲಿಲ್ಲ. 5 ರೂಪಾಯಿ ಸಂಬಳಕ್ಕೆ ವಕೀಲರ ಮಗನೊಬ್ಬನಿಗೆ ಟ್ಯೂಷನ್ ಹೇಳಿಕೊಡಲಾರಂಭಿಸಿಅರು. ಶೇಕಡ 60ರಷ್ಟು ಸಂಬಳವನ್ನು ಮನೆಗೆ ಕಳಿಸುತ್ತಿದ್ದರು.
1895ರಲ್ಲಿ ಅಜ್ಜನ ಬಲವಂತದಿಂದಾಗಿ 15ನೇ ವಯಸ್ಸಿನಲ್ಲಿಯೇ ವಿವಾಹವಾಗಬೇಕಾಗಿ ಬಂದಿತು. ಆದರೆ ಹೆಂಡತಿ ಜಗಳಗಂಟಿಯಾಗಿದ್ದಳು. ಹೆಂಡತಿ ತವರು ಮನೆಗೆ ಹಿಂದಿರುಗಿದಳು. ಪ್ರೇಮ್‍ಚಂದ್, ಆಕೆಯನ್ನು ಕರೆದುಕೊಂಡು ಬರಲು ಪ್ರಯತ್ನಿಸಲಿಲ್ಲ. ಅವರು ಬೇರೆಯಾದ ನಂತರ, 1906ರಲ್ಲಿ ಅವರು ಶಿವರಾಣಿ ದೇವಿ ಎಂಬ ಬಾಲವಿಧವೆಯನ್ನು ವಿವಾಹವಾದರು. ಆ ಕಾಲಕ್ಕೆ ಅದು ಕ್ರಾಂತಿಕಾರಕವಾಗಿತ್ತು. ಬಹಳಷ್ಟು ವಿರೋಧವನ್ನು ಎದುರಿಸಬೇಕಾಯಿತು. ಕೇವಲ ಬರವಣಿಗೆಯಲ್ಲಿ ಮಾತ್ರ ವಿಧವಾ ವಿವಾಹವನ್ನು ಬೆಂಬಲಿಸದೆ, ತಾವೇ ಅದನ್ನು ಪಾಲಿಸಿದ ಅಪರೂಪದ ವ್ಯಕ್ತಿಯವರು. ತಮ್ಮ ಮಡದಿಗೆ ಅಪಾರ ಗೌರವವನ್ನೂ ನೀಡುತ್ತಿದ್ದರು.
1905 ರಲ್ಲಿ ಕಾನ್‍ಪುರ್‍ಗೆ ತೆರಳಿ ಅಲ್ಲಿ ’ಜûಮಾ£” ಪತ್ರಿಕೆಯ ಸಂಪಾದಕರಾದ ದಯಾನಾರಾಯಣ್ ನಿಗಮ್ ಅವರನ್ನು ಭೇಟಿಯಾದರು. ನಂತರ ಬಹಳ ವರ್ಷಗಳು ಆ ಪತ್ರಿಕೆಗೆ ಲೇಖನಗಳನ್ನು, ಕಥೆಗಳನ್ನು ಬರೆದರು. 1905ರಲ್ಲಿ ರಾಷ್ಟ್ರೀಯತಾವಾದದಿಂದ ಪ್ರೇರಿತರಾದ ಅವರು ಗೋಪಾಲ್ ಕೃಷ್ಣ ಗೋಖಲೆಯವರ ವಿಧಾನಗಳನ್ನು ಟೀಕಿಸಿ ಬಾಲ ಗಂಗಾಧರ ತಿಲಕ್‍ರವರ ಉಗ್ರಗಾಮಿ ಕ್ರಮಗಳನ್ನು ಬೆಂಬಲಿಸಿ ಜûಮಾನಾದಲ್ಲಿ ಲೇಖನ ಬರೆದರು. ಅವರ ಮೊದಲ ಪ್ರಕಟಿತ ಕಥೆ “ದುನಿಯ ಕಾ ಸಬ್ ಸೆ ಅನ್ಮೋಲ್ ರತ್ನ್.” ಅವರ ಪ್ರಕಾರ ಸ್ವಾತಂತ್ರ್ಯ ಸಾಧಿಸಲು ಬೇಕಿರುವ ಕೊನೆಯ ರಕ್ತದ ಬಿಂದುವೇ ಅಮೂಲ್ಯ ರತ್ನ.
ದೇಶಪ್ರೇಮಿಯಾಗಿ ಅವರು ಉರ್ದುವಿನಲ್ಲಿ ಜನರನ್ನು ಬ್ರಿಟಿಷ್ ವಸಾಹತು ಆಳ್ವಿಕೆಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಪೆÇ್ರೀತ್ಸಾಹಿಸಿದರು. 1907ರಲ್ಲಿ ’ಸೋಜ್ ಎ ವತ£” ಎಂಬ ಹೆಸರಿನ ಕಥಾಸಂಕಲನವಾಗಿ ಬಿಡುಗಡೆಗೊಂಡಿತು. ಬ್ರಿಟಿಷ್ ಅಧಿಕಾರಿಗಳು ಇದನ್ನು ನಿಷೇಧಿಸಿದರು. ಇದರಿಂದಾಗಿ ಅವರು ನವಾಬ್‍ರಾಯ್‍ನಿಂದ ಪ್ರೇಮ್‍ಚಂದ್ ಎಂದು ಹೆಸರು ಬದಲಿಸಿಕೊಂಡರು.
1910 ರಷ್ಟರಲ್ಲಿ ಅವರು ಉರ್ದುವಿನ ಪ್ರಮುಖ ಬರಹಗಾರರಾಗಿ ಹೊರಹೊಮ್ಮಿದ್ದರು 1914ರಿಂದ ಹಿಂದಿಯಲ್ಲಿ ಬರೆಯಲಾರಂಭಿಸಿದರು. 1916ರಲ್ಲಿ ಗೋರಖ್‍ಪುರ್‍ನ ನಾರ್ಮಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರಾದರು. 1919ರಲ್ಲಿ ಅವರ ಮೊದಲ ಹಿಂದಿ ಕಾದಂಬರಿ “ಸೇವಾ ಸದನ್” ಪ್ರಕಟವಾಯಿತು. ಅವರು ಕೇವಲ ಬರವಣಿಗೆಯಲ್ಲಿ ಮಾತ್ರ ದೇಶಪ್ರೇಮಿಯಾಗಿರಲಿಲ್ಲ, ತಮ್ಮ ಆಚರಣೆಯಲ್ಲಿಯೂ ಸಹ ದೇಶಪ್ರೇಮಿಯಾಗಿದ್ದರು. ಗಾಂಧೀಜಿಯವರು ಕರೆನೀಡಿದ ಅಸಹಕಾರ ಚಳುವಳಿಯ ಭಾಗವಾಗಿ ಸ್ಕೂಲ್ ಇನ್ಸಪೆಕ್ಟರ್ ಆಗಿದ್ದ ಅವರು, ಕುಟುಂಬದ ಹೊಣೆಗಾರಿಕೆಯಿದ್ದರೂ ಸಹ, ತಮ್ಮ ಸರ್ಕಾರಿ ನೌಕರಿಯನ್ನು ತೊರೆದರು.. ಲಕ್ನೋದ ಪ್ರಗತಿಪರ ಬರಹಗಾರರ ಸಂಘದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು.
ಕೆಲಸ ಬಿಟ್ಟ ನಂತರ ಅವರು ಬನಾರಸ್‍ಗೆ ಹಿಂತಿರುಗಿ ತಮ್ಮ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಮಗ್ನರಾದರು. 1923 ರಲ್ಲಿ ತಾವೇ ಸರಸ್ವತಿ ಪ್ರೆಸ್ ಎಂಬ ಒಂದು ಪ್ರಿಂಟಿಂಗ್ ಪ್ರೆಸ್ ಆರಂಭಿಸಿದರು. 1930 ರಲ್ಲಿ ಹಂಸ್ ಎಂಬ ಸಾಹಿತ್ಯಿಕ-ರಾಜಕೀಯ ವಾರಪತ್ರಿಕೆಯನ್ನು ಆರಂಭಿಸಿದರು. ಭಾರತೀಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಹುರಿದುಂಬಿಸುವ ಗುರಿಯನ್ನು ಹೊಂದಿತ್ತು. ಆದರೆ ಅದರಿಂದ ನಷ್ಟ ಅನುಭವಿಸಿದ ಪ್ರೇಮ್‍ಚಂದ್‍ರವರು ಕಾನ್ಪುರದ ಮಾರ್ವಾರಿ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇರಿದರು. ಆದರೆ ಕಾಲೇಜಿನ ಆಡಳಿತ ಮಂಡಳಿಯ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಆ ಕೆಲಸವನ್ನು ಬಿಟ್ಟರು. ಬನಾರಸ್‍ನಲ್ಲಿ ಮರ್ಯಾದ ಪತ್ರಿಕೆಯ ಸಂಪಾದಕರಾದರು. ಕಾಶಿ ವಿದ್ಯಾಪೀಠದಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು.
ತೀವ್ರ ಹಣಕಾಸಿನ ಬಿಕ್ಕಟ್ಟಿನಿಂದಾಗಿ, 1934ರಲ್ಲಿ ಮುಂಬೈಗೆ ತೆರಳಿ ಅಲ್ಲಿ ಅಜಂತಾ ಸಿನಿಟೋನ್ ಪೆÇ್ರಡಕ್ಷನ್ ಹೌಸ್ ನಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಸೇರಿಕೊಂಡರು. ಮಜû್ದೂರ್ (ಕಾರ್ಮಿಕ) ಚಿತ್ರಕ್ಕೆ ಸ್ಕ್ರಿಪ್ಟ್ ಬರೆದರು. ಕಾರ್ಮಿಕ ವರ್ಗದ ಹೀನಾಯ ಪರಿಸ್ಥಿತಿಯನ್ನು ಚಿತ್ರಿಸಿದ ಆ ಚಿತ್ರ ಕಾರ್ಮಿಕ ವರ್ಗವನ್ನು ಹೋರಾಡುವಂತೆ ಹುರಿದುಂಬಿಸಿತು. ಚಿತ್ರವನ್ನು ನಿಷೇಧಿಸಲಾಯಿತು. ಮುಂಬೈನ ಚಿತ್ರರಂಗದ ವ್ಯಾಪಾರಿ ಧೋರಣೆ ಹಿಡಿಸದೆ ಪುನಃ ಬನಾರಸ್‍ಗೆ ಹಿಂತಿರುಗಿದರು. ಕ¥sóÀನ್ ಮತ್ತು ಗೋದಾನ್ ಬರೆದು ಮುಗಿಸಿದರು 1936.
ಮುನ್ಷಿ ಪ್ರೇಮ್‍ಚಂದ್‍ರವರು 20ನೇ ಶತಮಾನದ ಆದಿಭಾಗದ ಭಾರತದ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರು. ಕಾದಂಬರಿಕಾರರು, ಕತೆಗಾರರು, ನಾಟಕಕಾರರು, ಅನುವಾದಕರೂ ಆಗಿದ್ದ ಅವರು ಹಲವಾರು ಕಾದಂಬರಿಗಳು, ನೂರಾರು ಸಣ್ಣ ಕಥೆಗಳು ಮತ್ತು ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ಇತರೆ ಭಾಷೆಗಳಿಂದ ಬಹಳಷ್ಟು ಸಾಹಿತ್ಯ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಮೊದಲಿಗೆ ಉರ್ದುವಿನಲ್ಲಿ ತಮ್ಮ ಬರವಣಿಗೆಯನ್ನು ಆರಂಭಿಸಿದರು. ಕ್ರಮೇಣವಾಗಿ ಹಿಂದಿಯಲ್ಲಿ ಬರೆಯಲಾರಂಭಿಸಿದ ಅವರು ತಮ್ಮ ಶೈಲಿಯೊಂದಿಗೆ ಮತ್ತು ಮಹತ್ವಪೂರ್ಣ ಸಾಮಾಜಿಕ ಸಂದೇಶಗಳನ್ನು ನೀಡುವುದರೊಂದಿಗೆ ಓದುಗರ ಮನ ಗೆದ್ದರು. ಅವರ ಬರವಣಿಗೆಯ ಮುಖ್ಯ ಲಕ್ಷಣಗಳೆಂದರೆ ಸರಳ ಭಾಷೆಯ ಬಳಕೆ ಮತ್ತು ಆಸಕ್ತಿದಾಯಕವಾಗಿ ಕಥೆ ಹೇಳುವಿಕೆ. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮಸ್ಯೆಯನ್ನು ಬಿಂಬಿಸಿತು. ಸಂಸ್ಕೃತದ ಪ್ರಭಾವವಿದ್ದ ಹಿಂದಿಯನ್ನು ಬಳಸದೆ, ಜನರಾಡುತ್ತಿದ್ದ ಭಾಷೆಯನ್ನು ಸಾಹಿತ್ಯಕ್ಕೆ ತಂದರು.
ಸ್ವಾತಂತ್ರ್ಯಪ್ರೇಮಿ, ದೇಶಪ್ರೇಮಿಯಾಗಿದ್ದ ಅವರು ತಮ್ಮ ಆರಂಭಿಕ ಬರಹಗಳಲ್ಲಿ ಭಾರತದ ಉದ್ದಕ್ಕೂ ಬೆಳೆಯುತ್ತಿದ್ದ ರಾಷ್ಟ್ರೀಯ ಚಳುವಳಿಗಳನ್ನು ಚಿತ್ರಿಸಿದ್ದಾರೆ. ವಿಚಾರವಾದಿ ಧೋರಣೆಯನ್ನು ಹೊಂದಿದ್ದಾರೆ. ಅವರ ಪ್ರಕಾರ ಧಾರ್ಮಿಕ ಮೌಲ್ಯಗಳು ಬಲಿಷ್ಟ ಅವಕಾಶವಾದಿಗಳು ಬಲಹೀನರನ್ನು ಶೋಷಿಸಲು ಉಪಯೋಗಿಸುವ ಒಂದು ಅಸ್ತ್ರ. ಬಾಲ್ಯ ವೈಧವ್ಯ, ವೇಶ್ಯಾ ಪದ್ಧತಿ, ಊಳಿಗಮಾನ್ಯ ವ್ಯವಸ್ಥೆ, ಬಡತನ, ವಸಾಹತುವಾದ, ಸ್ವಾತಂತ್ರ್ಯ ಸಂಗ್ರಾಮ, ಭ್ರಷ್ಟಾಚಾರ ಮುಂತಾದ ವಿಷಯಗಳನ್ನು ಪ್ರತಿಪಾದಿಸಲು ಇಟ್ತಿದ್ದಾರೆ. ಸಮಾಜದ ವಿವಿಧ ಜನರ ಸಮಸ್ಯೆಗಳನ್ನು ಪ್ರತಿಬಿಂಬಿಸಿದ್ದಾರೆ. ಹಿಂದು – ಮುಸ್ಲಿಂ ಐಕ್ಯತೆಗೆ ಒತ್ತ್ತು ನೀಡಿದ್ದರೆ. ತಮ್ಮ ಮೊದಲ ಕಿರುಕಾದಂಬರಿ “ಅಸ್ರಾರ್ ಎ ಮಾಬಿದ್” ನಲ್ಲಿ ದೇವಸ್ಥಾನದ ಪೂಜಾರಿಗಳ ಭ್ರಷ್ಟತೆ ಮತ್ತು ಬಡ ಹೆಂಗಸರ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ಬಹಿರಂಗಗೊಳಿಸಿದರು. ಬ್ರಿಟಿಷ್ ಸರ್ಕಾರದೊಂದಿಗೆ ಸಹಕರಿಸುವ ಭಾರತೀಯರ ವಿಡಂಬನೆ ಮಾಡುತ್ತ ಕಥೆಗಳನ್ನು ಬರೆದಿದ್ದಾರೆ.
ಆಧು£ಕ ಬಾರತದ ಸಾಹಿತ್ಯಕ್ಷೇತ್ರದಲ್ಲಿಯೇ ಅವರ ಗೋದಾನ್ ಅನ್ನು ಉತ್ಕೃಷ್ಟ ಕಾದಂಬರಿಯಾಗಿ ಪರಿಗಣಿಸಲಾಗಿದೆ. ಭಾರತದಲ್ಲಿನ ಜಾತಿ ವ್ಯವಸ್ಥೆ, ಕೆಳ ವರ್ಗಗಳ ಶೋಷಣೆ, ಮಹಿಳೆಯರ ಶೋಷಣೆ, ಕೈಗಾರಿಕೀಕರಣದ ಸಮಸ್ಯೆಗಳನ್ನು ಮನೋಜ್ಞವಾಗಿ ಚಿತ್ರಿಸಿದೆ. 1963 ರಲ್ಲಿ ಇದು ಹಿಂದಿ ಚಿತ್ರವಾಯಿತು.
ಇತರ ಕಥಾವಸ್ತುಗಳೊಂದಿಗೆ, ಭಾರತದಲ್ಲಿ ಮಹಿಳೆಯರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದುದ್ದನ್ನು ಕಂಡು ಮನನೊಂದ ಅವರು ತಮ್ಮ ಹಲವಾರು ಕಥೆ, ಕಾದಂಬರಿಗಳಲ್ಲಿ ಹೆಣ್ಣುಮಕ್ಕಳ ಸಮಸ್ಯೆಗಳ ಬಗ್ಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ, ತನ್ಮೂಲಕ ಓದುಗರ ಮನಸ್ಸಿನಲ್ಲಿ ಅರಿವನ್ನು ಮೂಡಿಸಲೆತ್ನಿಸಿದ್ದಾರೆ. ನಿರ್ಮಲ ಮತ್ತು ಪ್ರತಿಜ್ಞ ಕಾದಂಬರಿಗಳು ಸ್ತ್ರೀಕೇಂದ್ರಿತವಾಗಿವೆ. ವರದಕ್ಷಿಣೆ ಮತ್ತು ವಿಧವಾ ವಿವಾಹದ ಬಗ್ಗೆ ಚರ್ಚಿಸಿವೆ. ಅವರ ಎರಡನೆ ಕಿರುಕಾದಂಬರಿ “ಪ್ರೇಮ’ ವಿಧವಾ ವಿವಾಹದ ಬಗ್ಗೆ ಚರ್ಚಿಸುತ್ತದೆ. ಅದರಲ್ಲಿ ಅಮೃತ್ ರಾಯ್ ಸಂಪ್ರದಾಯವಾದಿ ಸಮಾಜವನ್ನು ಧಿಕ್ಕರಿಸಿ ಪೂರ್ಣಳನ್ನು ವಿವಾಹವಾಗುತ್ತಾನೆ.
ಭಾರತ ಸಾಹಿತ್ಯ ಅಕಾಡೆಮಿ 2005 ರಲ್ಲಿ ಅವರ ಗೌರವಾರ್ಥವಾಗಿ ಪ್ರೇಮ್ ಚಂದ್ ¥sóÉಲೋಶಿಪ್ ಸ್ಥಾಪಿಸಿತು. ಇದನ್ನು ಸಾರ್ಕ್ ದೇಶಗಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಸಾಧಿಸಿದವರಿಗೆ ನೀಡಲಾಗುತ್ತದೆ.
ಅವರ ಕಥಾಸಂಕಲವನ್ನು “ಮಾನಸ ಸರೋವರ” ಎಂಬ ಹೆಸರಿನಡಿಯಲ್ಲಿ ಮುದ್ರಿಸಲಾಗಿದೆ. ಅವರು ಸಮಾಜ ಸುಧಾರಕರಾಗಿದ್ದರು. ಮಾತಿನಲ್ಲಲ್ಲದೆ ಕೃತಿಯಲ್ಲಿಯೂ ಮಾಡಿ ತೋರಿಸಿದ್ದಾರೆ. ಅವರ ಕೃತಿಗಳು - ಸೇವಾಸದನ್, ರಂಗ್ ಮಂಚ್, ಗಬನ್, ನಿರ್ಮಲ, ಗೋದಾನ್ - ಭಾರತದ ಎಲ್ಲಾ ಭಾಷೆಗಳಿಗೆ ಅನುವಾದಗೊಂಡಿದೆ. ಜೊತೆಗೆ ಇಂಗ್ಲಿಷ್, ರಷ್ಯನ್, ಚೀನಿ ಮತ್ತಿತರ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.
ಅವರನ್ನು ಉರ್ದು ಸಣ್ಣ ಕತೆಗಳ ಪಿತಾಮಹ ಎಂದು ಕರೆಯಲಾಗಿದೆ. ಅ¥sóÁ್ಸನಾ ಬರೆದ ಅವರು ಅದರಲ್ಲಿ ಹಾಸ್ಯವನ್ನು ವಿಡಂಬನೆಯನ್ನು ಬಳಸಿದ್ದಾರೆ. ಗಾಂಧೀಜಿಯವರ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಕೆಲಸಗಳಿಗೆ ಬೆಂಬಲ ನೀಡಲು ಸಾಹಿತ್ಯ ಕ್ಷೇತ್ರವನ್ನು ಆರಿಸಿಕೊಂಡು ಆ ಕ್ರಾಂತಿಕಾರಿ ವಿಚಾರಗಳನ್ನು ಅಳವಶಿಸಿಕೊಂಡರು. ಚಿಂತಕರಾದ ಅವರು ತಮ್ಮ ಬರವಣಿಗೆಯನ್ನು ಕೇವಲ ಮನರಂಜನೆಗೆ ಎಂದು ಭಾವಿಸದೆ ಸಾಮಾಜಿಕ ಉದ್ದೇಶವನ್ನು ಹೊಂದಿದ್ದು ಸಾಮಜಿಕ ಟೀಕೆಯನ್ನು ಒಳಗೊಂಡಿದೆ. ಅವರ ಪ್ರಕಾರ ಸಾಹಿತ್ಯ ಜನರನ್ನು ಅರಿವು ಮೂಡಿಸುವಲ್ಲಿ ಶಕ್ತಿಯುತ ಸಾಧನ. ಸಾಮಾಜಿಕ ಬೆಳವಣಿಗೆಯಲ್ಲಿ ನಂಬಿಕೆಯಿಟ್ಟ ಅವರು ಎಲ್ಲರಿಗೂ ಸಮಾನ ಅವಕಾಶ ಕೊಡಬೇಕೆಂದು ಪ್ರತಿಪಾದಿಸಿದರು. ಕಲೆ ಕಲೆಗಾಗಿ ಅಲ್ಲ, ಸಮಾಜ ಪ್ರಗತಿಗಾಗಿ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಆದ್ದರಿಂದಲೇ ಅವರ ಕತೆ-ಕಾದಂಬರಿಗಳು ಸಹ ಇಂದಿಗೂ ಜನಮನದಲ್ಲುಳಿದಿವೆ.
No comments:
Post a Comment