{ವ್ಯಕ್ತಿಯ ಬೆಳವಣಿಗೆಗೆ ಭಾಷೆ ಅತ್ಯವಶ್ಯಕ. ಜ್ಞಾನಕ್ಕೆ ಮತ್ತು ಸಂಪರ್ಕಕ್ಕೆ ಸಾಧನವಾದ ಭಾಷೆಯ ಮೇಲೆ ಹಿಡಿತ ಅಗತ್ಯ. ಮಹಾನ್ ಕವಿ ದಂಡಿ ಹೇಳುತ್ತಾರೆ: “ಭಾಷೆ ಎಂಬ ಬೆಳಕು ಇರದಿದ್ದರೆ ಈ ಜಗತ್ತು ಅಂಧಕಾರದಲ್ಲಿ ಮುಳುಗಿರುತ್ತಿತ್ತು.” ತಂತ್ರಜ್ಞಾನದ ಮೋಹದಲ್ಲಿ ಜನತೆ ಭಾಷೆಯನ್ನು ಅಲಕ್ಷಿಸುತ್ತಿದ್ದಾರೆ. ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಭಾಷೆಯ ಅಗತ್ಯವನ್ನು ಮನಗಂಡು ಈ ಭಾಷಾ ಆಟಗಳ ಅಂಕಣವನ್ನು ಆರಂಭಿಸಿದ್ದೇವೆ}
ಕೊಟ್ಟಿರುವ ಸುಳಿವನ್ನು ಬಳಸಿಕೊಂಡು ಕರ್ನಾಟಕದ ಊರುಗಳನ್ನು ಹೆಸರಿಸಿ
1. ವಿಷದ ಬೀಡು ಈ ಊರು _________________
2. ಸೀತಾಪತಿಯ ಪಟ್ಟಣ ______________
3. ಕಪಿಗಳು ಹೆಚ್ಚಿವೆಯಂತೆ ________________
4. ಸುಂದರವಾದ ಊರು ____________
5. ದೇಹವೇ ಮೇಲ್ಚಾವಣಿಯಾಗಿದೆ _____________
6. ಅಲಂಕಾರಿಕ ಕೋಟೆಯಿದು ______________
7. ಒಳ್ಳೆಯದನ್ನೇ ಮಾಡುವ ಬೆಟ್ಟ _____________
8. ಶಿವವಿಷ್ಣುವಿಬ್ಬರೂ ಇರುವ ಊರು _________
9. ತಂಗುವ ಸ್ಥಳವೇ ಊರಾಯಿತೇ ______________
10. ಆಲೋಚನೆಯ ಮುತ್ತು ಈ ಊರು _________
11. ಸುರರ ಗ್ರಾಮ ____________
12. ಜಯದ ಊರು ____________
13. ಚಿನ್ನದ ಮಾರುಕಟ್ಟೆ _______________
14. ನೂತನ ಕೋಟೆ _________________
15. ಹೊಸದಲ್ಲದ ನಾಡು ________________
16. ಮೈಸೂರು ಒಡೆಯರ ಊರು __________________
17. ಇಲ್ಲಿ ಔಷಧಿಯನ್ನು ಕೊಡುತ್ತಾರಂತೆ __________________
18. ನೂತನ ಪಟ್ಟಣ _____________________
19. ಕ್ಷೇಮ ವಿಚಾರಿಸುವ ಪಟ್ಟಣ __________________
20. ಚಿನ್ನದ ನಗರ __________________
21. ಚಿನ್ನದ ಮೈದಾನ __________________
22. ಮಕುಟ ಅದಲುಬದಲಾಗಿದೆ ____________
23. ಗಣಿತದಲ್ಲಿ ಬಳಸುವ ಪರಿಕರವೊಂದು ಊರಾಗಿದೆ ___________
24. ದಶರಥಪುತ್ರನ ಕೋಟೆ _______________
25. ನವೀನ ಮಾರುಕಟ್ಟೆ _____________
No comments:
Post a Comment