Monday, 5 September 2016

ಬೆಳಕಿನೆಡೆಗೆ

 [ವೈಜ್ಞಾನಿಕವಾಗಿ ಆಲೋಚಿಸದಿದ್ದರೆ, ಪ್ರತಿ ಸಮಸ್ಯೆಗೆ ನಿಜವಾದ ಪರಿಹಾರವನ್ನು ಹುಡುಕದಿದ್ದರೆ ಆಗುವಂತಹ ತೊಂದರೆಗಳು ಹಲವಾರು. ಒಂದೆಡೆ ಜನ ಅಪಾಯಕ್ಕೆ ಒಳಗಾಗುತ್ತಾರೆ, ಇನ್ನೊಂದೆಡೆ ಪರಿಹಾರ ಕಂಡುಕೊಳ್ಳಲು ಮಂತ್ರವಾದಿಗಳ, ಮೋಸಗಾರರ ಬಳಿ ಹೋಗಿ ಹಣವನ್ನು ಕಳೆದುಕೊಳ್ಳುತ್ತಾರೆ. ಮೂಢನಂಬಿಕೆಗಳನ್ನು ಬಿಟ್ಟು ವೈಚಾರಿಕವಾಗಿ, ತರ್ಕಬದ್ಧವಾಗಿ ಆಲೋಚಿಸಿದರೆ ಸಮಸ್ಯೆಗಳಿಗೆ ಸರಿಯಾದ ಪರಿಹಾರ ದೊರಕುತ್ತದೆ. ಈ ಅಂಕಣದಲ್ಲಿ ಅಂತಹ ವಿಚಾರಗಳನ್ನು ಚರ್ಚಿಸಲಾಗುವುದು. ಮೂಡನಂಬಿಕೆಯಿಂದ ವೈಚಾರಿಕತೆಯತ್ತ ಸಾಗಲಿ ನಮ್ಮ ಪಯಣ] 
ನಮ್ಮಲ್ಲಿ ದೇವಮಾನವರು, ಅತಿಮಾನವರು ಎನಿಸಿಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಇವರೆಲ್ಲ ಜನರ ಅಜ್ಞಾನವನ್ನು ಬಳಸಿಕೊಂಡು ಅವರನ್ನು ವಂಚಿಸುತ್ತಾ ಹೋಗುತ್ತಾರೆ. ಜನ ಮತ್ತೆ ಮತ್ತೆ ಇಂತಹ ಬಾಬಾಗಳ ತಂತ್ರಕ್ಕೆ ಬಲಿಯಾಗುತ್ತಾರೆ. ಮೌಢ್ಯವನ್ನು ಹೊಡೆದೋಡಿಸಲು ಜ್ಞಾನ ಅಗತ್ಯ. ದೇವಮಾನವರು ಎನಿಸಿಕೊಂಡವರು ಜನತೆಗೆ ಹೇಗೆ ಮೋಸ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಇದು ನಿಜ ಘಟನೆ. 
ಪ್ರೇಮಾನಂದ ಶ್ರೀಲಂಕಾದ ಕಾನೂನಿನಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿ. ಕೇರಳದ ಟ್ರಿಚಿಯ ಬಳಿ ಕಿರಾಪಟ್ಟಿ ಎನ್ನುವಲ್ಲಿ ಬಾಡಿಗೆಯ ಮನೆಯೊಂದರಲ್ಲಿ ಆಶ್ರಮವೊಂದನ್ನು ಆರಂಭಿಸಿದ. ಆರಂಭದಲ್ಲಿ 10-15 ಭಕ್ತರಿದ್ದರು. ಈ ವ್ಯಕ್ತಿ ಖಾಲಿ ಕೈಯಿಂದ ವಿಭೂತಿ ಬರಿಸುವುದು, ಬಾಯಿಂದ ಲಿಂಗವನ್ನು ಬರಿಸುವುದು ಮುಂತಾದ ಕಣ್ಕಟ್ಟು ವಿದ್ಯೆಯೊಂದಿಗೆ ಭಕ್ತರನ್ನು ಆಕರ್ಷಿಸತೊಡಗಿದ. ಹಣ ಬರಲಾರಂಭಿಸಿತು. ¥sóÁತಿಮಾ ನಗರದಲ್ಲಿ 150 ಎಕರೆ ಭೂಮಿಯನ್ನು ಕೇಳಿದ. ಅಧಿಕಾರದಲ್ಲಿದ್ದವರು ಅದನ್ನು ಕೊಟ್ಟರು. ಅನಾಥಾಶ್ರಮ ಮತ್ತು ಶಾಲೆಯೊಂದನ್ನು ಆರಂಭಿಸಿದ. ಭಕ್ತಾದಿಗಳು ಬಂದು ಉಳಿದುಕೊಳ್ಳಲು ರೂಮುಗಳನ್ನು ಕಟ್ಟಿದ.  ಮಂತ್ರಿಗಳೂ, ಉದ್ಯಮಿಗಳು ಬರಲಾರಂಭಿಸಿದರು. ಆಶ್ರಮ ಕೋಟಿಗಟ್ಟಲೆ ಹಣ ಲೂಟಿ ಹೊಡೆಯಿತು.
ಸುರೇಶ್ ಕುಮಾರಿ ಮತ್ತು ಲತಾ ಎನ್ನುವ ಆಶ್ರಮವಾಸಿಗಳು ಅಲ್ಲಿಂದ ತಪ್ಪಿಸಿಕೊಂಡು ಚೆನ್ನೈನಲ್ಲಿ ಮಹಿಳಾ ಸಂಘಟನೆಯೊಂದರ ನೆರವಿನೊಂದಿಗೆ ಪೆÇಲೀಸರಿಗೆ ದೂರನ್ನು ನೀಡಿದರು. ಆಶ್ರಮದಲ್ಲಿ ಮೇಲೆ ಪೆÇಲೀಸ್ ದಾಳಿ ನಡೆಯಿತು. ಅಲ್ಲಿಂದ ಸುಮಾರು ದಾಖಲೆಗಳನ್ನು, ಫೆÇೀಟೊಗಳನ್ನು ಮತ್ತು ಪತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಪ್ರೇಮಾನಂದ ಆಶ್ರಮದಲ್ಲಿ 20ಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ್ದನೆಂದು ಮತ್ತು ಆಶ್ರಮದ ಮುಖ್ಯಸ್ಥೆ ದಿವ್ಯಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ ಸುದ್ಧಿ ಬೆಳಕಿಗೆ ಬಂದಿತು. ಯುವತಿಯರನ್ನು ಆಕರ್ಷಿಸಿ, ಆಶ್ರಮದೊಳಗೆ ಬರಮಾಡಿಕೊಂಡು, ಅವರು ಶ್ರೀಮಂತರ ಜೊತೆಯಿದ್ದಾಗ ವಿಡಿಯೋ ತೆಗೆದು ಅವರನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದ. ಇಷ್ಟೇ ಅಲ್ಲದೆ ಅಶ್ರಮದ ಇಂತಹ ಚಟುವಟಿಕೆಗಳನ್ನು ವಿರೋಧಿಸಿದ ರವಿ ಎಂಬ ಇಂಜಿನಿಯರ್ ಅನ್ನು ಕೊಲೆ ಮಾಡಿ ಆಶ್ರಮದಲ್ಲಿಯೇ ಹೂತುಹಾಕಿದ್ದ. ಪೆÇಲೀಸರು ಆಶ್ರಮದಿಂದ ಆ ದೇಹವನ್ನು ಹೊರತೆಗೆದು ಪರೀಕ್ಷೆಗೆ ಕಳಿಸಿಕೊಟ್ಟರು.
ಪೆÇಲೀಸರು  ಚಾರ್ಜ್‍ಶೀಟ್ ಹಾಕಿ ಪ್ರೇಮಾನಂದನ ಜೊತೆ 6 ಜನ ಆರೋಪಿಗಳನ್ನು ಬಂಧಿಸಿತು. ಪ್ರೇಮಾನಂದನ ಪ್ರಿಯೆ ಜರ್ಮನಿಗೆ ತಪ್ಪಿಸಿಕೊಂಡು ಹೋದಳು. ಅವಳ ಹೆಸರಿನಲ್ಲಿದ್ದ 80 ಲಕ್ಷ ರೂಪಾಯಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಬೇಲ್ ಪಡೆದುಕೊಳ್ಳುವ ಪ್ರೇಮಾನಂದನ ಎಲ್ಲ ಪ್ರಯತ್ನ ವಿಫಲವಾಯಿತು. ರಾಮ್ ಜೇತ್‍ಮಲಾನಿಯನ್ನು ತನ್ನ ವಕೀಲರನ್ನಾಗಿ ನೇಮಿಸಿಕೊಂಡ. ಡಿಎನ್‍ಎ ಪರೀಕ್ಷೆಯಲ್ಲಿ ಅವನು ಬಲಾತ್ಕಾರ ಮಾಡಿದ ಅರುಲ್ ಜ್ಯೋತಿಯ ಗರ್ಭದಲ್ಲಿದ್ದ ಭ್ರೂಣದೊಂದಿಗೆ ಪ್ರೇಮಾನಂದನ ರಕ್ತ ಹೊಂದಿಕೊಂಡಿದ್ದು, ಅವನು ಆಕೆಯನ್ನು ಅತ್ಯಾಚಾರ ಮಾಡಿದ್ದ ಎನ್ನುವುದನ್ನು ದೃಢೀಕರಿಸಿತು. 1997 ರಲ್ಲಿ ಪುದುಕೊಟ್ಟೈ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಆರ್. ಭಾನುಮತಿ ಅವನಿಗೆ ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿ, 67.30 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದರು. ಈ ಹಣವನ್ನು 13 ಜನ ಅತ್ಯಾಚಾರಕ್ಕೊಳಗಾದವರಿಗೆ  ಹಂಚಬೇಕೆಂದು ತೀರ್ಪಿತ್ತರು. ಅವನ ಸಂಗಡಿಗರಿಗೂ ಸಹ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. 2002 ರಲ್ಲಿ ಚೆನ್ನೈ ಹೈಕೋರ್ಟ್ ಮತ್ತು 2005ರಲ್ಲಿ ಸರ್ವೋಚ್ಛ ನ್ಯಾಯಾಲಯ ಈ ತೀರ್ಪನ್ನು ಎತ್ತಿಹಿಡಿದವು. 2011 ರಲ್ಲಿ ಪ್ರೇಮಾನಂದ ಜೈಲಿನಲ್ಲಿದ್ದಾಗಲೇ ಸಾವನ್ನಪ್ಪಿದ.
ನಮ್ಮ ದೇಶದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಕಾನೂನು ಅವರನ್ನು ಬಂಧಿಸಿ ಶಿಕ್ಷೆಯನ್ನೂ ನೀಡಿದೆ. ಆದರೆ ಜನರ ಅಜ್ಞಾನ ಎಷ್ಟರ ಮಟ್ಟಿಗಿದೆ ಎಂದರೆ ಜನ ಪದೇ ಪದೇ ಹಳ್ಳಕ್ಕೆ ಬೀಳುತ್ತಲೇ ಇದ್ದಾರೆ. ಇಂತಹವರನ್ನು ನಂಬಿ ತಮ್ಮ ಹಣ, ಆಸ್ತಿ, ಮಾನ, ಪ್ರಾಣಗಳನ್ನು ಕಳೆದುಕೊಳ್ಳುತ್ತಲೇ ಇದ್ದಾರೆ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಲಂಪಟತನ ನಡೆಸುವವರನ್ನು, ಜನರನ್ನು ವಂಚಿಸುವವರನ್ನು ಜನ ಧಿಕ್ಕರಿಸಬೇಕು. 

No comments:

Post a Comment